ADVERTISEMENT

ಧರ್ಮದ ಹೆಸರಲ್ಲಿ ಬೇರಾದವರು, ನೋವಿನಲ್ಲಿ ಒಂದಾದರು: ನ್ಯಾಯಕ್ಕಾಗಿ ಹೋರಾಡುತ್ತಿವೆ ಬಂಧಿತರ ಕುಟುಂಬಗಳು

ಏಜೆನ್ಸೀಸ್
Published 29 ಜನವರಿ 2018, 13:08 IST
Last Updated 29 ಜನವರಿ 2018, 13:08 IST
ಬಂಧಿತರೊಬ್ಬರ ಕುಟುಂಬದವರು.                                      –ಎಎನ್‌ಐ ಚಿತ್ರ
ಬಂಧಿತರೊಬ್ಬರ ಕುಟುಂಬದವರು. –ಎಎನ್‌ಐ ಚಿತ್ರ   

ಕಾಸ್‌ಗಂಜ್‌(ಉತ್ತರ ಪ್ರದೇಶ): ಗಣರಾಜ್ಯೋತ್ಸವ ದಿನದಂದು ಎರಡು ಕೋಮಿನ ಗುಂಪುಗಳ ನಡುವೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸ್‌ಗಂಜ್‌ ಜಿಲ್ಲಾ ಪೊಲೀಸರು 81 ಜನರನ್ನು ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಎರಡೂ ಧರ್ಮಗಳ ಬಂಧಿತರ ಕುಟುಂಬದವರು ಒಟ್ಟಾಗಿ ಸೇರಿ ಬಿಡುಗಡೆಗೆ ಆಗ್ರಹಿಸಿದರು. ಇದು ಮಾನವೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಕುರಿತು ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಕೊತ್ವಾಲಿ ಪೊಲೀಸ್‌ ಠಾಣೆಯಲ್ಲಿ ಹೆಚ್ಚಿನವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ಬಂಧನಕ್ಕೊಳಗಾಗಿರುವ ಎರಡೂ ಧರ್ಮದವರ ಕುಟುಂಬದವರು ಬಿಡುಗಡೆಗಾಗಿ ಆಗ್ರಹಿಸಿ ಠಾಣೆ ಎದುರು ಜಮಾಯಿಸಿದ್ದಾರೆ.

ಸದ್ಯ ಈ ಸಂಬಂಧ ಬಂಧನಕ್ಕೊಳಗಾಗಿರುವ ರೈಲ್ವೆ ಪಾಠಕ್‌ ಕಾಲೊನಿಯ ಕೂಲಿ ಕಾರ್ಮಿಕ ಮತೀನ್‌ ಖಾನ್‌(27) ಅವರ ತಾಯಿ ಜಮೀನಿ ಬೇಗಂ ಹಾಗೂ 18 ವರ್ಷದ ಹಿಂದೂ ಯುವಕ ಜೋಗಿಂದರ್‌ ಅವರ ತಾಯಿ ರಮಾದೇವಿ ಅವರು ಅಕ್ಕಪಕ್ಕದಲ್ಲಿ ಕುಳಿತು ತಮ್ಮ ಮಕ್ಕಳ ಬಿಡುಗಡೆಗಾಗಿ ಆಗ್ರಹಿಸಿದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.