ADVERTISEMENT

‘ಮೋದಿ ಅವರು ಸಂಕ್ಷೇಪಾಕ್ಷರ ರೂಪಿಸುವ ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ’

ಪ್ರಧಾನಿಯ ಟಾಪ್‌ ಆದ್ಯತೆ ಮಾತಿಗೆ ಟ್ವಿಟರ್‌ನಲ್ಲಿ ಹರಿದಾಡುತ್ತಿವೆ ಸ್ವಾರಸ್ಯಕರ ಪ್ರತಿಕ್ರಿಯೆಗಳು

ಏಜೆನ್ಸೀಸ್
Published 5 ಫೆಬ್ರುವರಿ 2018, 10:42 IST
Last Updated 5 ಫೆಬ್ರುವರಿ 2018, 10:42 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಪರಿವರ್ತನಾ ಸಮಾವೇಶದಲ್ಲಿ ತರಕಾರಿ ಬೆಳೆಯುವ ರೈತರ ಆದಾಯ ಹೆಚ್ಚಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ(TOP) ಟ್ವಿಟರ್‌ನಲ್ಲಿ ವ್ಯಂಗ್ಯವಾದ ಪ್ರತಿಕ್ರಿಯೆಗಳು ಹರಿದಾಡುತ್ತಿವೆ.

‘ನಮ್ಮ ಸರ್ಕಾರ ತರಕಾರಿ ಬೆಳೆಯುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ. ಅದರಲ್ಲೂ ‘ಟಿಓಪಿ’(TOP) ಟೊಮೆಟೊ, ಆನಿಯನ್‌(ಈರುಳ್ಳಿ), ಪೊಟ್ಯಾಟೊ (ಆಲೂಗಡ್ಡೆ) ಕೃಷಿಗೆ ಹೆಚ್ಚಿನ ಒತ್ತು ನೀಡುತ್ತೇವೆ’ ಎಂದು ತರಕಾರಿಗಳ ಮೊದಲಾಕ್ಷರಗಳನ್ನು ಪೋಣಿಸಿ ಸ್ಮಜನಾತ್ಮಕ ಮಾತನ್ನು ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿದ್ದರು.

ಮೋದಿ ಅವರ ಮಾತನ್ನು ಉಲ್ಲೇಖಿಸಿ, ನಿರ್ದಿಷ್ಟ ಪದಗಳಿಗೆ ಸ್ವಾರಸ್ಯಕರ ವಿವರಣೆ ನೀಡುತ್ತ, ಹಲವಾರು ಜನರು ಟ್ವಿಟರ್‌ನಲ್ಲಿ ಹಾಸ್ಯದ ಹೊನಲು ಹರಿಸುತ್ತಿದ್ದಾರೆ.

ADVERTISEMENT

‘ಮೋದಿ ಅವರು ಸಂಕ್ಷೇಪಾಕ್ಷರಗಳನ್ನು ರೂಪಿಸುವ ಗಂಭೀರ ಕಾಯಿಲೆಗೆ ತುತ್ತಾಗಿದ್ದಾರೆ’ ಎಂದು ಕೀರ್ತಿ ಯಾದವ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. ಅದಕ್ಕಾಗಿ ಅವರು SAD ಪದವನ್ನು Serious Acronym Disorder ಎಂದು ವಿಸ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.