ADVERTISEMENT

ಫೆ. 10ರಿಂದ ಯುಎಇ, ಒಮನ್‌ಗೆ ಪ್ರಧಾನಿ ಪ್ರವಾಸ

ಏಜೆನ್ಸೀಸ್
Published 5 ಫೆಬ್ರುವರಿ 2018, 12:13 IST
Last Updated 5 ಫೆಬ್ರುವರಿ 2018, 12:13 IST
ಫೆ. 10ರಿಂದ ಯುಎಇ, ಒಮನ್‌ಗೆ ಪ್ರಧಾನಿ ಪ್ರವಾಸ
ಫೆ. 10ರಿಂದ ಯುಎಇ, ಒಮನ್‌ಗೆ ಪ್ರಧಾನಿ ಪ್ರವಾಸ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆ. 10ರಿಂದ ಮೂರು ದಿನ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಪ್ಯಾಲಿಸ್ಟೈನ್‌ಗೆ ಐತಿಹಾಸಿಕ ಭೇಟಿ ಮಾಡುವರು.

ಪ್ರಧಾನಿ ಪ್ಯಾಲಿಸ್ಟೈನ್‌ಗೆ ತರಳುತ್ತಿದ್ದು ಫೆ.10ರಂದು ಅಲ್ಲಿನ ರಮಲ್ಲಾಗೆ ಭೇಟಿ ಮಾಡುವರು. ಇದೊಂದು ಐತಿಹಾಸಿಕ ಭೇಟಿ ಆಗಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಪ್ರಧಾನಿ ಅವರು ಅರಬ್ ಒಕ್ಕೂಟ(ಯುಎಇ) ಮತ್ತು ಒಮನ್‌ಗೆ ಫೆ. 10ರಿಂದ 12 ವರೆಗೆ ಭೇಟಿ ನೀಡುವರು. 10ರಂದು ಪ್ಯಾಲಿಸ್ಟೈನ್‌ನಿಂದ ಸಂಜೆ ಯುಎಇಗೆ ತೆರಳಲಿದ್ದಾರೆ. ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ನೀಡಿರುವ ಆಹ್ವಾನ ಮೇರೆಗೆ ಈ ಪ್ರವಾಸ ಕೈಗೊಂಡಿದ್ದಾರೆ ಎಂದು ಸಚಿವಾಲಯ ವಿವವರ ನೀಡಿದೆ.

ADVERTISEMENT

2017ರಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜತೆಗೆ ಅರಬ್ ಒಕ್ಕೂಟದ (ಯುಎಇ) 179  ಸೈನಿಕರು ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.