ADVERTISEMENT

70 ಸಸಿ ನೆಡಿ: ಯುಜಿಸಿ

ಏಜೆನ್ಸೀಸ್
Published 20 ಸೆಪ್ಟೆಂಬರ್ 2017, 20:04 IST
Last Updated 20 ಸೆಪ್ಟೆಂಬರ್ 2017, 20:04 IST
70 ಸಸಿ ನೆಡಿ: ಯುಜಿಸಿ
70 ಸಸಿ ನೆಡಿ: ಯುಜಿಸಿ   

ನವದೆಹಲಿ: ದೇಶದ 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ 70 ಸಸಿಗಳನ್ನು ನೆಡಬೇಕು ಮತ್ತು ‘ಸ್ವಚ್ಛ ಭಾರತ’ ಆಂದೋಲನದ ಮೂರನೇ ವಾರ್ಷಿಕೋತ್ಸವ ಆಚರಿಸಬೇಕು ಎಂದು ಯುಜಿಸಿ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಿದೆ.

ಈ ನಿರ್ದೇಶನವನ್ನು ಪಾಲಿಸಿರುವ ಬಗ್ಗೆ ಸಂಬಂಧಪಟ್ಟ ಚಿತ್ರಗಳನ್ನು ಕಳುಹಿಸುವಂತೆ ಸೂಚಿಸಲಾಗಿದೆ.

ವಿಶ್ವವಿದ್ಯಾಲಯಗಳ ಆವರಣದಲ್ಲಿ ಸಸಿಗಳನ್ನು ನೆಡಬಹುದು. ಜತೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ವಚ್ಛತೆ ಕಾಪಾಡುವ ಬಗ್ಗೆ ಪ್ರತಿಜ್ಞೆ ಸ್ವೀಕರಿಸಬೇಕು ಎಂದು ತಿಳಿಸಿದೆ.

ADVERTISEMENT

ಸ್ವಚ್ಛ ಭಾರತದ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಸೆ.15ರಿಂದ ಅ.2ರವರೆಗಿನ ಅವಧಿಯನ್ನು ’ಸ್ವಚ್ಛತಾ ಹೈ ಸೇವಾ’ ಎಂದು ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಕಟ್ಟಡ ಮತ್ತು ಆವರಣಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಯುಜಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.