ADVERTISEMENT

 ಭಾರತದ ಅತಿದೊಡ್ಡ ವೀಸಾ ವಿತರಣಾ ಕೇಂದ್ರ ಬಾಂಗ್ಲಾದೇಶದಲ್ಲಿ ಉದ್ಘಾಟನೆ

ಏಜೆನ್ಸೀಸ್
Published 14 ಜುಲೈ 2018, 13:09 IST
Last Updated 14 ಜುಲೈ 2018, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಢಾಕಾ: ಬಾಂಗ್ಲಾ ವಾಸಿಗಳು ಭಾರತಕ್ಕೆ ಭೇಟಿ ನೀಡುವ ಪ್ರಕ್ರಿಯೆ ಮತ್ತಷ್ಟು ಸುಲಭಗೊಳಿಸಲು ಆ ದೇಶದ ರಾಜಧಾನಿ ಢಾಕಾದಲ್ಲಿ ಅತಿದೊಡ್ಡ ವೀಸಾ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಮೂರು ದಿನಗಳ ಭೇಟಿಗೆಂದು ಬಾಂಗ್ಲಾದೇಶಕ್ಕೆ ತೆರಳಿರುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಬಾಂಗ್ಲಾದ ಗೃಹಮಂತ್ರಿ ಅಸಾದುಝ್ಜಾಮಾನ್‌ ಖಾನ್‌ ಅವರೊಂದಿಗೆ ಹೊಸ ಕೇಂದ್ರದ ಉದ್ಘಾಟನೆಯನ್ನುಶನಿವಾರ ನೆರವೇರಿಸಿದರು.

ಭಾರತಕ್ಕೆ ಭೇಟಿ ನೀಡುವ ವಿದೇಶಿಗರಲ್ಲಿ ಬಾಂಗ್ಲಾದೇಶಿಯರೆಹೆಚ್ಚು. ಕಳೆದ ವರ್ಷ 14 ಲಕ್ಷ ಬಾಂಗ್ಲಾ ವಾಸಿಗಳು ಭಾರತದ ವೀಸಾ ಪಡೆದಿದ್ದರು ಎಂದು ಆ ದೇಶದ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಜಮುನಾ ಫ್ಯೂಚರ್‌ ಪಾರ್ಕ್‌ನಲ್ಲಿರುವ ನೂತನಕೇಂದ್ರವು 18,500 ಚದರ ಅಡಿ ಸ್ಥಳಾವಕಾಶ ಹೊಂದಿದೆ. ಢಾಕಾದಲ್ಲಿ ಸದ್ಯ ಇರುವ ವೀಸಾ ವಿತರಣೆಯ ನಾಲ್ಕು ಹಳೆಯ ಕೇಂದ್ರಗಳನ್ನು ಹಂತ–ಹಂತವಾಗಿ ಇಲ್ಲಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

‘ಬಾಂಗ್ಲಾದೇಶದ ಪ್ರಜೆಗಳಿಗೆ ಐದು ವರ್ಷದ ಮಲ್ಟಿಪಲ್‌ ಎಂಟ್ರಿ ಟೂರಿಸ್ಟ್‌ ವೀಸಾ ನೀಡಲಾಗುವುದು. ಹಾಗೆಯೇ ಸದ್ಯ ವೀಸಾಕ್ಕೆ ಅರ್ಜಿ ಸಲ್ಲಿಸಲು ಪಡೆಯಬೇಕಾದ ಇ–ಟೋಕನ್‌ ವ್ಯವಸ್ಥೆಯನ್ನು ಹಿಂಪಡೆಯಲಾಗುವುದು’ ಎಂದು ರಾಜನಾಥ್ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.