ADVERTISEMENT

ಅತ್ತೆ –ಮಾವನಿಗೆ ಹಿಂಸೆ:ಸೊಸೆ ಬಂಧನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST

ಉಡುಪಿ: ವೃದ್ಧ ಅತ್ತೆ ಮತ್ತು ಮಾವನಿಗೆ ಹಿಂಸೆ ನೀಡಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ತೆಂಕನಿಡಿಯೂರಿನ ಲಕ್ಷ್ಮಿನಗರದ ಅಶ್ವಿನಿ ಪೈ (32) ಎಂಬಾಕೆಯನ್ನು ಮಲ್ಪೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಪೈ ಮತ್ತು ಅವರ ಪತ್ನಿ ವೀಣಾ ಪೈ ಅವರು ಮಗ ಲಕ್ಷ್ಮಣ್ ಮತ್ತು ಸೊಸೆಯೊಂದಿಗೆ ವಾಸವಿದ್ದರು. ಅವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ ಅಶ್ವಿನಿ ಹಲ್ಲೆ ನಡೆಸುತ್ತಿದ್ದಳು. ಕೆಲ ದಿನಗಳ ಹಿಂದೆ ಜಗಳವಾದಾಗ ಸೌಟನ್ನು ಕಾಯಿಸಿ ಅತ್ತೆಗೆ ಬರೆ ಹಾಕಿದ್ದಳು. ಇದರಿಂದ ಆತಂಕಕ್ಕೊಳಗಾಗಿದ್ದ ವೆಂಕಟೇಶ್ ಪೈ ದೂರು ನೀಡಿದ್ದರು.

ಅರೋಪಿಯನ್ನು ಬಂಧಿಸಿ ನ್ಯಾಯಾಡಡಡಲಯಕ್ಕೆ ಹಾಜರುಪಡಿಸಲಾಗಿದ್ದು ಇದೇ 29ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.