ADVERTISEMENT

ಅತ್ಯಾಚಾರ ಯತ್ನ ಪ್ರಕರಣ ಆರೋಪಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST
ಚಂದ್ರಹಾಸ
ಚಂದ್ರಹಾಸ   

ಮದ್ದೂರು: ತಾಲ್ಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಾ.ಪಂ ಸಹಾಯಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಗ್ರಾ.ಪಂ ಅಧ್ಯಕ್ಷ ಚಂದ್ರಹಾಸ ಅವರನ್ನು ಪಟ್ಟಣದ ಜೆಎಂಎಫ್‌ ನ್ಯಾಯಾಲಯವು ಜೂನ್‌ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 

ತೆರವುಗೊಳ್ಳದ ಬೀಗಮುದ್ರೆ:  ಗ್ರಾಮ ಪಂಚಾಯಿತಿ ಕಚೇರಿಯ ಬೀಗಮುದ್ರೆ ಯನ್ನು ಭಾನುವಾರವೂ ಗ್ರಾಮಸ್ಥರು ತೆರವುಗೊಳಿಸಲಿಲ್ಲ. ‘ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಅವರೊಂದಿಗೆ ಶಾಮೀಲಾಗಿ ಪಿಡಿಒ ಮಲ್ಲೇಶ್‌ ಹಣ ದುರುಪಯೋಗ ನಡೆಸಿದ್ದಾರೆ.

ಕಚೇರಿಯ ಗುಮಾಸ್ತ ನವೀನ್‌ ಅವರು ಶೌಚಾಲಯ ನಿರ್ಮಾ ಣದ ಫಲಾನುಭವಿಗಳ ಹಣವನ್ನು ಮಂಡ್ಯ ಗುತ್ತಲು ಎಸ್‌ಬಿಎಂ ಶಾಖೆಯ ತನ್ನ ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ಅಲ್ಲದೆ, ₹ 2.5 ಲಕ್ಷ  ಹಣವನ್ನು ಬೋಗಸ್‌ ಫಲಾನು ಭವಿಗಳ ಹೆಸರಿನಲ್ಲಿ ತಮ್ಮ ಆಪ್ತರ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಜಿ.ಪಂ ಸಿಇಒ ಶರತ್‌ ಅವರು ಕೂಡಲೇ ಪಿಡಿಒ ಮಲ್ಲೇಶ್‌ ಹಾಗೂ ಗುಮಾಸ್ತ ನವೀನ್‌ ಅವರನ್ನು ಅಮಾನತುಗೊಳಿಸಬೇಕು. ಅಲ್ಲಿಯವರೆಗೆ ಗ್ರಾ.ಪಂ ಕಚೇರಿಯ ಬೀಗ ತೆರೆವು ಗೊಳಿಸುವುದಿಲ್ಲ’ ಎಂದು ಗ್ರಾಮದ ಮುಖಂಡ ಕೆ.ದಾಸೇಗೌಡ ಹಾಗೂ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.