ADVERTISEMENT

ಅಭಿವೃದ್ಧಿಗೆ ದೇಸಿ ತಳಹದಿ ಅಗತ್ಯ

ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್‌

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2015, 19:36 IST
Last Updated 1 ಫೆಬ್ರುವರಿ 2015, 19:36 IST
ಚನ್ನಗಿರಿ ಸಮೀಪದ ಗರಗ ಕ್ರಾಸ್‌ನ ಕೆಳದಿ ಚೆನ್ನಮ್ಮ ಮಹಾಮಂಪಟದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾನುವಾರ ಬರವಣಿಗೆಯಲ್ಲಿ ನಿರತರಾದ ಕೇಂದ್ರದ ಗೃಹ ಸಚಿವ ರಾಜನಾಥ್ ಸಿಂಗ್‌ ಅವರನ್ನು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಖಾತೆ ರಾಜ್ಯ ಸಚಿವ ಜಿ.ಎಂ.ಸಿದ್ದೇಶ್ವರ,  ಹಾಗೂ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗಮನಿಸುತ್ತಿರುವುದು

ಜೆ.ಎಚ್‌.ಪಟೇಲ್‌ ವೇದಿಕೆ, ಚನ್ನಗಿರಿ: ‘ಭಾರತದ ಅಭಿವೃದ್ಧಿ ಯಾವುದೇ ದೇಶದ ಅಭಿವೃದ್ಧಿ ಮಾದರಿಯನ್ನು ನಕಲು ಮಾಡುವುದರಿಂದ ಸಾಧ್ಯ ವಾಗುವುದಿಲ್ಲ. ಭಾರತದ ಅಭಿವೃದ್ಧಿ ಆಗಬೇಕಾದರೆ ಅದು ಈ ಮಣ್ಣಿನ ಸಂಸ್ಕೃತಿ, ಸಭ್ಯತೆ ಜತೆ ಸಮ್ಮಿಳಿತ ವಾಗಿರಬೇಕು’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ ಅಭಿಪ್ರಾಯ ಪಟ್ಟರು.

ಸಮೀಪದ ಗರಗ ಕ್ರಾಸ್‌ನ ಕೆಳದಿ ಚೆನ್ನಮ್ಮ ಮಹಾಮಂಪಟದಲ್ಲಿ ತರಳ ಬಾಳು ಹುಣ್ಣಿಮೆ ಮಹೋತ್ಸವದ ಏಳನೇ ದಿನವಾದ ಭಾನುವಾರ ಅವರು ಅತಿಥಿಯಾಗಿ ಮಾತ ನಾಡಿದರು.

ತಮ್ಮ ಭಾಷಣದ ಉದ್ದಕ್ಕೂ ದೇಶದ ಪ್ರಾಚೀನ ಸಂಸ್ಕೃತಿ, ವಿಜ್ಞಾನ ಪರಂಪರೆಯನ್ನು ಉಲ್ಲೇಖಿಸಿದ ರಾಜನಾಥ್ ಸಿಂಗ್‌, ‘ಈ ದೇಶದ ಸಂಸ್ಕೃತಿ ಶ್ರೇಷ್ಠವಾದುದು. ಇಲ್ಲಿ ಯವರು ಮನುಷ್ಯರಲ್ಲಿ ಮಾತ್ರ ದೇವರನ್ನು ಕಾಣಲಿಲ್ಲ. ಪಶು–ಪಕ್ಷಿ, ಗಿಡ–ಮರಗಳಲ್ಲಿ, ಕಲ್ಲು, ಮಣ್ಣಿನಲ್ಲಿ ದೇವರನ್ನು ಕಂಡರು. ಇಂಥ ಸಂಸ್ಕೃತಿ– ಪರಂಪರೆ ನಮಗೆ ಹಿರಿಯರಿಂದ ಬಂದ ಬಳುವಳಿ ಎಂದು ಅವರು ಹೇಳಿದರು.

ಈ ಸತ್ಯಾಂಶವನ್ನು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಂಡು ಕೊಂಡಿದ್ದಾರೆ’ ಎಂದು ರಾಜನಾಥ್ ಸಿಂಗ್‌ ಹೇಳಿದರು.
ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.