ADVERTISEMENT

ಇಂದಿನಿಂದ ಹುಬ್ಬಳ್ಳಿ ಮೈಸೂರು ಹೊಸ ರೈಲು

​ಪ್ರಜಾವಾಣಿ ವಾರ್ತೆ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಇಂದಿನಿಂದ ಹುಬ್ಬಳ್ಳಿ ಮೈಸೂರು ಹೊಸ ರೈಲು
ಇಂದಿನಿಂದ ಹುಬ್ಬಳ್ಳಿ ಮೈಸೂರು ಹೊಸ ರೈಲು   
ಮೈಸೂರು: ಹುಬ್ಬಳ್ಳಿ– ಮೈಸೂರು ನಡುವೆ (ಬೆಂಗಳೂರು ಮೂಲಕ) ಹೊಸ ರೈಲು ಸೇವೆ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ.
 
ಆರಂಭಿಕ ವಿಶೇಷ ರೈಲು ಸೇವೆಗೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ರೈಲ್ವೆ ಸಚಿವ ಸುರೇಶ್‌ ಪ್ರಭು ನವದೆಹಲಿಯಲ್ಲಿ ವಿಡಿಯೊ ಲಿಂಕ್‌ ಮೂಲಕ ಚಾಲನೆ ನೀಡಲಿದ್ದಾರೆ.
 
‘ಹುಬ್ಬಳ್ಳಿ–ಮೈಸೂರು–ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌’ ಹೆಸರಿನ ಈ ರೈಲು (ಸಂಖ್ಯೆ 17325) ಮೇ 24ರಿಂದ ನಿತ್ಯ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಸಂಜೆ 5.40ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 5.45ಕ್ಕೆ ಹೊರಟು ರಾತ್ರಿ 8.40ಕ್ಕೆ ಮೈಸೂರಿಗೆ ಬರಲಿದೆ.
 
ಹಾಗೆಯೇ, ರೈಲು (ಸಂಖ್ಯೆ 17326) ನಿತ್ಯ ಬೆಳಿಗ್ಗೆ 6.15ಕ್ಕೆ ಮೈಸೂರಿನಿಂದ ಹೊರಟು 9.10ಕ್ಕೆ ಬೆಂಗಳೂರು ತಲುಪಲಿದೆ. ಅಲ್ಲಿಂದ 9.15ಕ್ಕೆ ಹೊರಟು ಸಂಜೆ 7.05ಕ್ಕೆ ಹುಬ್ಬಳ್ಳಿ ತಲುಪಲಿದೆ.
 
ಈ ರೈಲು ಶ್ರೀರಂಗಪಟ್ಟಣ, ಪಾಂಡವಪುರ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರ, ಬಿಡದಿ, ಕೆಂಗೇರಿ, ಬೆಂಗಳೂರು (ಕೆಎಸ್‌ಆರ್‌), ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ಅಜ್ಜಂಪುರ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಬ್ಯಾಡಗಿ, ಹಾವೇರಿ ಮತ್ತು ಯಲವಗಿ ಮಾರ್ಗದಲ್ಲಿ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.