ADVERTISEMENT

ಐವರು ಲೇಖಕರಿಗೆ ವಿಜ್ಞಾನ ಅಕಾಡೆಮಿ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2015, 19:30 IST
Last Updated 20 ಏಪ್ರಿಲ್ 2015, 19:30 IST

ಬೆಂಗಳೂರು:  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2014–15ನೇ ಸಾಲಿನ ವಿಜ್ಞಾನ, ಕೃಷಿ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳ ಶ್ರೇಷ್ಠ ಲೇಖಕ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಿದೆ.

‘ಪ್ರಶಸ್ತಿಯು ತಲಾ ₨ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಜೂನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಸನ್ಮಾನಿಸಲಾಗುವುದು’  ಎಂದು ಅಕಾಡೆಮಿಯ ಕಾರ್ಯದರ್ಶಿ ಡಾ.ಎಚ್‌. ಹೊನ್ನೇಗೌಡ ಅವರು ತಿಳಿಸಿದರು.

‘ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಅಕಾಡೆಮಿಯು ಲೇಖಕರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. 54 ಪುಸ್ತಕಗಳು ಬಂದಿದ್ದವು. ಅದರಲ್ಲಿ ಅಂತಿಮವಾಗಿ ಐದು ಪುಸ್ತಕಗಳನ್ನು ಆಯ್ಕೆ  ಮಾಡಲಾಯಿತು’ ಎಂದು ಹೇಳಿದರು.

ಆಯ್ಕೆಯಾದ ಲೇಖಕರು, ಕೃತಿಗಳು
ನಾಗೇಶ್‌ ಹೆಗಡೆ

(ನರಮಂಡಲ ಬ್ರಹ್ಮಾಂಡ)

ಡಾ.ಎನ್‌.ಎಸ್‌. ಲೀಲಾ (ಜೀವಜಗತ್ತಿನ ಕೌತುಕಗಳು – ಉಸಿರಾಟ)
ಡಾ. ಎನ್‌.ಬಿ. ಶ್ರೀಧರ
(‘ಹೈನು ಹೊನ್ನು’. ಸಹ ಲೇಖಕರು: ಡಾ. ಗಣೇಶ ಎಂ. ಹೆಗಡೆ ಮತ್ತು ಡಾ. ನಾಗರಾಜ ಕೆ.ಎಂ.)

ಡಾ. ಕೆ.ಸಿ. ಶಶಿಧರ್‌
(ನೀರೆತ್ತೊಣ ಬನ್ನಿ)

ಜಿ.ಎಸ್‌. ಆರ್ಯಮಿತ್ರ
(ಕ್ಷಯರೋಗ ಕಾರಣ–ಪರಿಹಾರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.