ADVERTISEMENT

ಒಂದೇ ದಿನದಲ್ಲಿ ₹1.06 ಲಕ್ಷ ದಂಡ  

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:29 IST
Last Updated 24 ಅಕ್ಟೋಬರ್ 2016, 19:29 IST
ರಾಮಚಂದ್ರಯ್ಯ
ರಾಮಚಂದ್ರಯ್ಯ   

ಬೆಂಗಳೂರು: ಚಿಕ್ಕಪೇಟೆ ಸಂಚಾರ ಠಾಣೆಯ ಪಿಎಸ್‌ಐ  ಡಿ.ಜಿ. ರಾಮಚಂದ್ರಯ್ಯ, ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಗೆ ₹1.06 ಲಕ್ಷ ದಂಡ ವಿಧಿಸಿದರು.

‘ಠಾಣೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಕಾರ್ಯಾಚರಣೆ ನಡೆಸಿದ ರಾಮಚಂದ್ರಯ್ಯ 871 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಅತೀ ಹೆಚ್ಚು ದಂಡ ವಿಧಿಸುವ ಮೂಲಕ ದಾಖಲೆ ಮಾಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಈ ಹಿಂದೆ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆಯ ಎಸ್‌ಐ ಉಮೇಶ್ ಉಡುಪಿ, ಒಂದೇ ದಿನ ₹65,800 ದಂಡ ಸಂಗ್ರಹಿಸಿದ್ದರು. ಜತೆಗೆ  ಬ್ಯಾಟರಾಯನಪುರ ಠಾಣೆಯ ಎಸ್‌ಐ ಶಿವಸ್ವಾಮಿ ಸಹ ₹66,700 ದಂಡ  ವಿಧಿಸಿದ್ದರು. ಅದಾದ ನಂತರ ರಾಮಚಂದ್ರಯ್ಯ ಅತ್ಯಧಿಕ ದಂಡ ಸಂಗ್ರಹಿಸಿದ್ದಾರೆ. ಅವರ ಕಾರ್ಯಕ್ಕೆ ಸೂಕ್ತ ಬಹುಮಾನ ನೀಡುವಂತೆ ಉನ್ನತ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.