ADVERTISEMENT

‘ಒಳ್ಳೆ ಹುಡುಗ’ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿ, ಲೈವ್‌ ವಿಡಿಯೊದಲ್ಲಿ ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2017, 9:32 IST
Last Updated 5 ಏಪ್ರಿಲ್ 2017, 9:32 IST
‘ಒಳ್ಳೆ ಹುಡುಗ’ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿ, ಲೈವ್‌ ವಿಡಿಯೊದಲ್ಲಿ ಹೇಳಿದ್ದೇನು?
‘ಒಳ್ಳೆ ಹುಡುಗ’ ಪ್ರಥಮ್ ಆತ್ಮಹತ್ಯೆಗೆ ಯತ್ನಿಸಿ, ಲೈವ್‌ ವಿಡಿಯೊದಲ್ಲಿ ಹೇಳಿದ್ದೇನು?   

ಬೆಂಗಳೂರು : ಕನ್ನಡ ಬಿಗ್‌ ಬಾಸ್‌ 4ನೇ ಆವೃತ್ತಿಯ ವಿಜೇತ ಪ್ರಥಮ್‌ ಆತ್ಮಹತ್ಯೆಗೆ ಯತ್ನಿಸಿ ಅದರ ಲೈವ್‌ ವಿಡಿಯೊವನ್ನು ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಬಸವೇಶ್ವರನಗರದಲ್ಲಿನ ತಮ್ಮ ನಿವಾಸದಲ್ಲಿ  ಈ ದುಡುಕು ನಿರ್ಧಾರ ಕೈಗೊಂಡಿದ್ದು  ಅವರನ್ನು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಈ ಬಗ್ಗೆ  ಬಸವೇಶ್ಚರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಥಮ್‌ ತಮ್ಮ ಫೇಸ್‌ ಬುಕ್‌  ವಿಡಿಯೊದಲ್ಲಿ   ಕ್ಷುಲ್ಲಕ ಕಾರಣಗಳಿಗೆ ಬೇಸತ್ತಿದ್ದೇನೆ, ಮನಸ್ಸಿಗೆ ತುಂಬಾ ನೋವಾಗಿದೆ, ಜೀವನವೇ ಬೇಡ ಎನ್ನಿಸಿದೆ ಎಂದು ಹೇಳಿಕೊಂಡಿದ್ದಾರೆ.

ADVERTISEMENT

ಗೆಳೆಯರು, ಆಪ್ತರು, ಸಿನಿಮಾರಂಗದ ಕೆಲವರು ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದು ವಿಡಿಯೊದಲ್ಲಿ ಆರೋಪಿಸಿದ್ದಾರೆ. 

ಪ್ರಥಮ್‌ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ ಎನ್ನಲಾಗಿದೆ.  ಪ್ರಥಮ್‌ ಅವರ 20 ನಿಮಿಷಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.