ADVERTISEMENT

ಕರ್ನಾಟಕದಾದ್ಯಂತ ಬಿರುಸಿನ ಮತದಾನ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 9:13 IST
Last Updated 17 ಏಪ್ರಿಲ್ 2014, 9:13 IST

ಬೆಂಗಳೂರು(ಐಎಎನ್ ಎಸ್): ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿನ ನೂರಾರು ಮತಗಟ್ಟೆಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದೆ.

‘ರಾಜ್ಯದಾದ್ಯಂತ ದೊರೆತ ಪ್ರಾಥಮಿಕ ವರದಿ ಪ್ರಕಾರ, 54,261 ಮತಗಟ್ಟೆಗಳಲ್ಲಿ ಬಿಗಿ ಭದ್ರತೆ ನಡುವೆ ಬೆಳಗ್ಗೆ ಏಳು ಗಂಟೆಗೆ  ಶಾಂತಿಯುತ ಮತದಾನ ಆರಂಭಗೊಂಡಿದ್ದು, ಸುಗಮವಾಗಿ ಸಾಗುತ್ತಿದೆ’ ಎಂದು  ಹಿರಿಯ ಚುನಾವಣಾಧಿಕಾರಿ ವಿ. ಪೊನ್ನುರಾಜ್  ತಿಳಿಸಿದ್ದಾರೆ.

ಅಲ್ಲದೆ ‘ಮೊದಲ 90 ನಿಮಿಷಗಳಲ್ಲಿ   ಶೇಕಡಾ 10ರಿಂದ 12 ಮತದಾನ ದಾಖಲಾಗಿದೆ’ ಎಂದು ಪೊನ್ನುರಾಜ್ ತಿಳಿಸಿದರು. ಮತದಾನ ಪ್ರಕ್ರಿಯೆ ಆರಂಭಕ್ಕೂ ಮೊದಲೇ ಬೆಂಗಳೂರು ಮತ್ತು ಇತರ ಪಟ್ಟಣಗಳ ಕೆಲವು ಮತಗಟ್ಟೆಗಳಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು.

ಮತದಾನದ ಅಂಗವಾಗಿ ರಾಜ್ಯದಾದ್ಯಂತ   ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.