ADVERTISEMENT

ಕಲಬುರಗಿ, ವಿಜಯಾಪುರ: ಸರ್ಕಾರದ ಆದೇಶ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2014, 19:40 IST
Last Updated 31 ಅಕ್ಟೋಬರ್ 2014, 19:40 IST

ಬೆಂಗಳೂರು: ‘ಗುಲ್ಬರ್ಗ’ ನಗರದ ಹೆಸರನ್ನು ‘ಕಲಬುರಗಿ’ ಮತ್ತು ‘ವಿಜಾಪುರ’ವನ್ನು ‘ವಿಜಯಾ­ಪುರ’ ಎಂದು ಬದಲಾವಣೆ ಮಾಡಿ ಕಂದಾಯ ಇಲಾಖೆ ಶುಕ್ರ­ವಾರ ಅಧಿಸೂಚನೆ ಹೊರಡಿಸಿದೆ. ಉಳಿದ 10 ನಗರಗಳ  ಹೆಸರು­ಗಳನ್ನು ರೋಮನ್‌ ಮತ್ತು ದೇವ­ನಾ­ಗರಿ ಲಿಪಿಗಳಲ್ಲಿ  ಕನ್ನಡದ ಉಚ್ಚಾ­ರಣೆಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ.

ರಾಜ್ಯದ 12 ನಗರಗಳ ಹೆಸರು ಬದಲಾ­ವಣೆಗೆ  ಅ.17ರಂದು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿ­ಸಿತ್ತು. ಕೇಂದ್ರದ ಸೂಚನೆ ಆಧರಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯೋತ್ಸವದ ದಿನವಾದ ಶನಿವಾರದಿಂದ ಹೊಸ ಹೆಸರುಗಳು ಜಾರಿಗೆ ಬರಲಿವೆ. 
‘ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಲ್ಲಿ ‘ಮೈಸೂರು’ ಎಂಬುದು ‘MYSURE' ಆಗಿತ್ತು. ಈ ಬಗ್ಗೆ ಪುನಃ ಕೇಂದ್ರ ಗೃಹ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸರ್ವೆ ಆಫ್‌ ಇಂಡಿ­ಯಾವನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆಯಲಾಯಿತು. 

ಅದು ಮುದ್ರಣದಲ್ಲಿ ಆದ ದೋಷ. ‘MYSURU' ಎಂದೇ ಬದಲಾವಣೆ ಮಾಡಬೇಕು ಎಂಬ ಅಭಿಪ್ರಾಯ ದೊರೆಯಿತು. ಅದರಂತೆ ತಿದ್ದುಪಡಿ ಮಾಡಬೇಕು ಎಂಬ ಸೂಚನೆ ದೊರೆಯಿತು. ಆ ಬಳಿಕ ಅಧಿಸೂಚನೆ ಹೊರಡಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

ಬದಲಾದ ಹೆಸರುಗಳು
ಕನ್ನಡ            ಇಂಗ್ಲಿಷ್‌

ಬೆಂಗಳೂರು BENGALURU
ಮಂಗಳೂರು MANGALURU
ಬಳ್ಳಾರಿ  BALLARI
ವಿಜಯಾಪುರ VIJAYAPURA
ಬೆಳಗಾವಿ  BELAGAVI
ಚಿಕ್ಕಮಗಳೂರು     CHIKKAMAGALURU
ಕಲಬುರಗಿ KALABURAGI
ಮೈಸೂರು MYSURU
ಹೊಸಪೇಟೆ HOSAPETE
ಶಿವಮೊಗ್ಗ SHIVAMOGGA
ಹುಬ್ಬಳ್ಳಿ  HUBBALLI
ತುಮಕೂರು TUMAKURU

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT