ADVERTISEMENT

ಕೆಎಸ್‌ಒಯು ನಕಲಿ ಅಂಕಪಟ್ಟಿ: ಸಹಾಯಕ ಕುಲಸಚಿವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 20:33 IST
Last Updated 26 ಜುಲೈ 2017, 20:33 IST

ಮೈಸೂರು: ನಕಲಿ ಅಂಕಪಟ್ಟಿ ಜಾಲದಲ್ಲಿ ಶಾಮೀಲಾದ ಆರೋಪದಡಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಸಹಾಯಕ ಕುಲಸಚಿವ ಸಿದ್ದರಾಜು ಸೇರಿ ಮೂವರನ್ನು ನಗರ ಅಪರಾಧ ಪತ್ತೆ ದಳದ (ಸಿಸಿಬಿ) ಪೊಲೀಸರು ಬುಧವಾರ ವಿಚಾರಣೆ ನಡೆಸಿದರು.

ಕೆಎಸ್‌ಒಯು ಅಂಕಪಟ್ಟಿಗಳ ಮುದ್ರಣದ ಹೊರಗುತ್ತಿಗೆ ಪಡೆದಿದ್ದ ‘ಐಯುಎಂ’ ಕಂಪೆನಿಯ ಮುಖ್ಯಸ್ಥ ವೇಣು ಹಾಗೂ ವಿಶ್ವವಿದ್ಯಾಲಯದ ಹಂಗಾಮಿ ನೌಕರ ಶಿವಣ್ಣ ವಿಚಾರಣೆ ಎದುರಿಸಿದರು.

ಎರಡು ದಿನಗಳ ಹಿಂದೆ ಪೊಲೀಸರ ಬಲಗೆ ಬಿದಿದ್ದ ಹಂಗಾಮಿ ನೌಕರ ಪ್ರಜ್ವಲ್‌ನನ್ನು ವಿಶ್ವವಿದ್ಯಾಲಯವು ಸೇವೆಯಿಂದ ವಜಾಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.