ADVERTISEMENT

ಕೆಪಿಎಸ್‌ಸಿ ಪರೀಕ್ಷೆ: ರಮೇಶಗೆ 2ನೇ ರ್‌್ಯಾಂಕ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಬಾಗಲಕೋಟೆ: ಕರ್ನಾಟಕ ಲೋಕಸೇವಾ ಆಯೋಗವು 2014ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯಲ್ಲಿ ಜಮಖಂಡಿ ತಾಲ್ಲೂಕಿನ ಹುನ್ನೂರು ಗ್ರಾಮದ ರಮೇಶ್ ಕೋಲಾರ ಎರಡನೇ ರ್‍ಯಾಂಕ್ ಪಡೆದಿದ್ದಾರೆ.

ಹುನ್ನೂರಿನ ಸಿದ್ದಪ್ಪ– ಸುವರ್ಣ ದಂಪತಿ ಪುತ್ರ ರಮೇಶ ಎಂಜಿನಿಯರಿಂಗ್‌ (ಕಂಪ್ಯೂಟರ್‌ ಸೈನ್ಸ್‌) ಪದವೀಧರರಾಗಿದ್ದು, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. ಯಾವುದೇ ವಿಶೇಷ ತರಬೇತಿ ಪಡೆಯದೆ ಧಾರವಾಡದಲ್ಲಿ ಇದ್ದುಕೊಂಡು ಸ್ವಯಂ ಅಧ್ಯಯನ ಮಾಡಿದ್ದಾರೆ. ಹಾಲು ಮಾರಿ ಹಾಗೂ ಜಾತ್ರೆಗಳಲ್ಲಿ ತೆಂಗಿನಕಾಯಿ ಮಾರಿ ಬಂದ ಹಣದಿಂದ ಅವರು ಶಿಕ್ಷಣ ಪೂರೈಸಿದ್ದಾರೆ.

ಎಸ್‌ಐಗೆ 12ನೇ ರ್‌್ಯಾಂಕ್‌ (ಮೈಸೂರು ವರದಿ): ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪರೀಕ್ಷೆಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಕುವೆಂಪುನಗರದ ಪ್ರೊಬೇಷನರಿ ಎಸ್‌ಐ ಜಿ.ಅನುಷಾ ಅವರು 12ನೇ ರ್‌್ಯಾಂಕ್‌ ಪಡೆದಿದ್ದಾರೆ. ಡಿವೈಎಸ್‌ಪಿ ರ್‌್ಯಾಂಕ್‌ನಲ್ಲಿ ಇವರು ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.