ADVERTISEMENT

ಗೀತಾ ನಾಗಭೂಷಣ, ನೇಮಾಡೆಗೆ ಕಟ್ಟಿಮನಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2014, 19:30 IST
Last Updated 5 ಅಕ್ಟೋಬರ್ 2014, 19:30 IST

ಬೆಳಗಾವಿ: ಸಾಹಿತಿಗಳಾದ ಡಾ. ಗೀತಾ ನಾಗಭೂಷಣ ಮತ್ತು ಡಾ. ಭಾಲಚಂದ್ರ ನೇಮಾಡಿ ಅವರಿಗೆ 2014ನೇ ಸಾಲಿನ ಬಸವರಾಜ ಕಟ್ಟಿಮನಿ ರಾಷ್ಟ್ರೀಯ ಕಾದಂಬರಿ ಪ್ರಶಸ್ತಿಯನ್ನು ಭಾನುವಾರ ಇಲ್ಲಿ ನೀಡಿ ಗೌರವಿಸಲಾಯಿತು. ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಆಶ್ರಯದಲ್ಲಿ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಈ ಸಮಾರಂಭ  ಹಮ್ಮಿಕೊಳ್ಳಲಾಗಿತ್ತು. ಪ್ರಶಸ್ತಿಯು ತಲಾ ₨ 50,000 ನಗದು ಹಾಗೂ ಫಲಕ ಒಳಗೊಂಡಿದೆ.

‘ಇಂದು ಬಸವರಾಜ ಕಟ್ಟಿಮನಿ ಪ್ರತಿಷ್ಠಾನವು ಕನ್ನಡ ಮತ್ತು ಮರಾಠಿ ಸಾಹಿತಿಗಳಿಗೆ ಪ್ರಶಸ್ತಿ ನೀಡುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ. ಗಡಿಯಲ್ಲಿ ಕನ್ನಡ– ಮರಾಠಿ ಬಾಂಧವ್ಯ ಬೆಸೆಯಲು ವೇದಿಕೆ ಕಲ್ಪಿಸಿದೆ’ ಎಂದು ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಹೇಳಿದರು.

‘ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾದ ಡಾ. ಗೀತಾ ನಾಗಭೂಷಣ ಮತ್ತು ಡಾ. ಭಾಲಚಂದ್ರ ನೇಮಾಡಿ ಅವರು ಅತ್ಯುತ್ತಮ ಲೇಖಕರು ಎಂಬುದರಲ್ಲಿ ಎರಡು ಮಾತಿಲ್ಲ’ ಎಂದು ಶ್ಲಾಘಿಸಿದರು. ಡಾ. ಗೀತಾ ನಾಗಭೂಷಣ ಅವರು, ‘ಇಂದಿನ ದಿನಗಳಲ್ಲಿ ಕೆಲವು ಸಾಹಿತಿಗಳು ರಾಜ­ಕಾರಣದತ್ತ ಒಲವು ಬೆಳೆಸಿಕೊಳ್ಳು­ತ್ತಿ­ದ್ದಾರೆ. ಪ್ರಶಸ್ತಿ, ಸೌಕರ್ಯಗಳಿಗಾಗಿ ವಿಧಾನ­ಸೌಧದ ಸುತ್ತ ಅಲೆಯುತ್ತಿ­ದ್ದು, ಪ್ರಶಸ್ತಿಗಾಗಿ ಇಷ್ಟೊಂದು ಕೀಳುಮ­ಟ್ಟಕ್ಕೆ ಇಳಿಯುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.