ADVERTISEMENT

ಗೌತಮಿ ಊರಿನಲ್ಲಿ ನೆನಪು, ನೋವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2015, 19:30 IST
Last Updated 1 ಏಪ್ರಿಲ್ 2015, 19:30 IST

ಪಾವಗಡ: ಬೆಂಗಳೂರು ಕಾಡುಗೋಡಿಯಲ್ಲಿ ಪಿ.ಯು ವಿದ್ಯಾರ್ಥಿನಿ ಗೌತಮಿ ಹತ್ಯೆ ತಾಲ್ಲೂಕಿನ ಜನತೆಯಲ್ಲಿ ತಲ್ಲಣ ಉಂಟು ಮಾಡಿದೆ.

ಮಂಗಳವಾರ ರಾತ್ರಿ ಹತ್ಯೆಯಾದ ವಿದ್ಯಾರ್ಥಿನಿಗೆ ತಾಲ್ಲೂಕಿನ ಶಾಲೆ– ಕಾಲೇಜುಗಳಲ್ಲಿ ಬುಧವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮಗಳನ್ನು ವೈದ್ಯೆ ಮಾಡಬೇಕು ಎಂಬ ಪೋಷಕರ ಕನಸು ನುಚ್ಚು ನೂರಾಗಿದೆ ಎಂದು ಮೃತಳ ಮನೆ ಬಳಿ ಸಂಬಂಧಿಕರು ಕಣ್ಣೀರಿಡುತ್ತಾ ಗೋಳಾಡುತ್ತಿದ್ದರು.

ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಔಷಧಿ ಅಂಗಡಿ ನಡೆಸುತ್ತಿರುವ ರಮೇಶ್ ಹಾಗೂ ಲಕ್ಷ್ಮಿ ದಂಪತಿಯ ಒಬ್ಬಳೇ ಮಗಳು ಗೌತಮಿ. ಪ್ರೌಢಶಾಲೆ ವಿದ್ಯಾಭ್ಯಾಸವನ್ನು ದಾವಣಗೆರೆಯಲ್ಲಿ ಮುಗಿಸಿದ್ದಳು. ದ್ವಿತೀಯ ಪಿ.ಯು ವ್ಯಾಸಂಗ ಮುಗಿಸಿ ಸಿಇಟಿ ತರಬೇತಿಗಾಗಿ ಬೆಂಗಳೂರಿನಲ್ಲಿಯೇ ಇದ್ದಳು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಆಕೆ ಸರಳ ವ್ಯಕ್ತಿತ್ವ ಹೊಂದಿದ್ದು, ಎಲ್ಲರೊಂದಿಗೂ ಸೌಜನ್ಯದಿಂದ ನಡೆದುಕೊಳ್ಳುತ್ತಿದ್ದಳು. ವಿದ್ಯಾಭ್ಯಾಸದಲ್ಲಿಯೂ ಮುಂಚೂಣಿಯಲ್ಲಿದ್ದಳು. ಆಕೆಯ ಅನಿರೀಕ್ಷಿತ ಸಾವು ದಿಗ್ಭ್ರಾಂತರನ್ನಾಗಿಸಿದೆ ಎಂದು ಮೃತಳ ಸ್ನೇಹಿತರು, ನೆರೆ ಹೊರೆಯವರು ‘ಪ್ರಜಾವಾಣಿ’ಗೆ ತಿಳಿಸಿದರು.

ದಾವಣಗೆರೆ ಪ್ರತಿಭೆ: ದಾವಣಗೆರೆ ಹೊರವಲಯದ ಶಿರಮಗೊಂಡಹಳ್ಳಿಯಲ್ಲಿರುವ ಅನ್‌ಮೋಲ್‌ ಪಬ್ಲಿಕ್‌ ಶಾಲೆಯಲ್ಲಿ 8ರಿಂದ 10ನೇ ತರಗತಿವರೆಗೂ ವ್ಯಾಸಂಗ ಮಾಡಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.