ADVERTISEMENT

ಟೋಲ್‌ ಸಿಬ್ಬಂದಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:37 IST
Last Updated 24 ಏಪ್ರಿಲ್ 2017, 19:37 IST
ಅಂಬರೀಷ್  ಅವರ ಬೆಂಬಲಿಗರು ಟೋಲ್‌ಪ್ಲಾಜಾ ಬಳಿ ಟೋಲ್‌ ಸಂಗ್ರಹಿಸುವ  ಬೂತ್‌ ಕಚೇರಿ ಧ್ವಂಸ ಮಾಡಿರುವುದು.
ಅಂಬರೀಷ್ ಅವರ ಬೆಂಬಲಿಗರು ಟೋಲ್‌ಪ್ಲಾಜಾ ಬಳಿ ಟೋಲ್‌ ಸಂಗ್ರಹಿಸುವ ಬೂತ್‌ ಕಚೇರಿ ಧ್ವಂಸ ಮಾಡಿರುವುದು.   

ಬಾಗೇಪಲ್ಲಿ: ಆಂಧ್ರ ಪ್ರದೇಶದ ಸಂಸದ ಕೃಷ್ಣಪ್ಪ ನಿಮ್ಮುಲ ಅವರ ಪುತ್ರ ಅಂಬರೀಷ್ ಸೋಮವಾರ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವಾಗ, ರಾಷ್ಟ್ರೀಯ ಹೆದ್ದಾರಿ 7ರ ಟೋಲ್‌ ಪ್ಲಾಜಾದಲ್ಲಿ ವಾಹನ ತಡೆದರು ಎಂಬ ಕಾರಣಕ್ಕಾಗಿ ಆತನ ಬೆಂಬಲಿಗರು ಟೋಲ್‌ ಪ್ಲಾಜಾ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

‘30 ಜನ ಏಕಾಏಕಿ ಟೋಲ್‌ ಪ್ಲಾಜಾಗೆ ನುಗ್ಗಿ ಕಚೇರಿ ಧ್ವಂಸ ಮಾಡಿ, ಎರಡು ಕಂಪ್ಯೂಟರ್‌ಗಳನ್ನು ನಾಶಗೊಳಿಸಿದ್ದಾರೆ. ಕಬ್ಬಿಣದ ರಾಡ್‌ನಿಂದ ನನ್ನ ಕೈಗಳಿಗೆ ಹೊಡೆದಿದ್ದಾರೆ’ ಎಂದು ಹಲ್ಲೆಗೆ ಒಳಗಾದ ಸಿಬ್ಬಂದಿ ನಟರಾಜ್ ಹೇಳಿದ್ದಾರೆ.

‘ನಾನು ಸಂಸದರ ಒತ್ತಡಕ್ಕೆ ಮಣಿದಿಲ್ಲ. ಠಾಣಾ ಜಾಮೀನಿನ ಮೇಲೆ ಅಂಬರೀಷ್ ಅವರನ್ನು ಬಿಟ್ಟಿರುವುದು ಸರಿಯಲ್ಲ’ಎಂದು ಪ್ಲಾಜಾದ ನಿರ್ದೇಶಕ ಉದಯ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.