ADVERTISEMENT

ತಮಿಳುನಾಡು, ರಾಜ್ಯ ರೈತರಿಗೆ ಕೆಆರ್‌ಎಸ್‌ ನೀರು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2016, 19:27 IST
Last Updated 3 ಅಕ್ಟೋಬರ್ 2016, 19:27 IST
ತಮಿಳುನಾಡು, ರಾಜ್ಯ ರೈತರಿಗೆ ಕೆಆರ್‌ಎಸ್‌ ನೀರು
ತಮಿಳುನಾಡು, ರಾಜ್ಯ ರೈತರಿಗೆ ಕೆಆರ್‌ಎಸ್‌ ನೀರು   

ಮಂಡ್ಯ: ಜಿಲ್ಲೆಯ ಕೆಆರ್‌ಎಸ್‌ ಅಣೆಕಟ್ಟೆಯಿಂದ 6,800 ಕ್ಯುಸೆಕ್‌ ನೀರನ್ನು ಸೋಮವಾರ ರಾತ್ರಿ 9ರಿಂದ ಹೊರ ಬಿಡಲು ಆರಂಭಿಸಲಾಗಿದ್ದು, ಅದರಲ್ಲಿ 3 ಸಾವಿರ ಕ್ಯುಸೆಕ್‌ ನಷ್ಟು ನೀರು ತಮಿಳುನಾಡಿಗೂ ಹರಿದು ಹೋಗಲಿದೆ.

ಅಣೆಕಟ್ಟೆಯ ನಾಲೆಗಳಿಗೆ 2,800  ಕ್ಯುಸೆಕ್‌ ಹಾಗೂ ನದಿಗೆ 4 ಸಾವಿರ ಕ್ಯುಸೆಕ್‌ ನೀರನ್ನು ಹರಿಬಿಡಲಾಗುತ್ತಿದೆ. ನದಿಗೆ ಬಿಟ್ಟಿರುವ 4 ಸಾವಿರ ಕ್ಯುಸೆಕ್‌ ನೀರಿನಲ್ಲಿ ಒಂದು ಸಾವಿರ ಕ್ಯುಸೆಕ್‌ನಷ್ಟು ನೀರು ನದಿಯ ನಾಲೆಗಳಿಗೆ ಹರಿದರೆ, ಉಳಿದ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ.

ವಿಶ್ವೇಶ್ವರಯ್ಯ ಸೇರಿದಂತೆ ವಿವಿಧ ನಾಲೆಗಳಿಗೆ ಬಿಟ್ಟಿರುವ ನೀರಿನಲ್ಲಿಯೂ ಗದ್ದೆಗಳಿಂದ ಸೋರಿಕೆಯಾಗಿ ಹಳ್ಳಗಳ ಮೂಲಕ ನದಿಗೆ ಒಂದಷ್ಟು ನೀರೂ ಸೇರಲಿದೆ ಎನ್ನುತ್ತವೆ ವಿಶ್ವಸನೀಯ ಮೂಲಗಳು.

ಹಾರಂಗಿಯಿಂದ ನೀರು ಬಿಡುಗಡೆ: ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಿಂದ ಸೋಮವಾರ ರಾತ್ರಿ 10.15ರಿಂದ ನದಿಗೆ 4,000 ಕ್ಯುಸೆಕ್‌ ಹಾಗೂ ನಾಲೆಗಳಿಗೆ 1,500 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.