ADVERTISEMENT

ತಮಿಳು, ಮಲಯಾಳಂ, ಗುಜರಾತಿ ಭಾಷೆಗಳಿಗೆ ಮಣೆ; ಕೇಂದ್ರ ಭವಿಷ್ಯ ನಿಧಿ ವೆಬ್‌ಸೈಟ್‌ನಲ್ಲಿ ಕನ್ನಡಕ್ಕಿಲ್ಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 29 ಮೇ 2017, 11:37 IST
Last Updated 29 ಮೇ 2017, 11:37 IST
ತಮಿಳು, ಮಲಯಾಳಂ, ಗುಜರಾತಿ   ಭಾಷೆಗಳಿಗೆ ಮಣೆ; ಕೇಂದ್ರ ಭವಿಷ್ಯ ನಿಧಿ ವೆಬ್‌ಸೈಟ್‌ನಲ್ಲಿ ಕನ್ನಡಕ್ಕಿಲ್ಲ ಸ್ಥಾನ
ತಮಿಳು, ಮಲಯಾಳಂ, ಗುಜರಾತಿ ಭಾಷೆಗಳಿಗೆ ಮಣೆ; ಕೇಂದ್ರ ಭವಿಷ್ಯ ನಿಧಿ ವೆಬ್‌ಸೈಟ್‌ನಲ್ಲಿ ಕನ್ನಡಕ್ಕಿಲ್ಲ ಸ್ಥಾನ   

ನವದೆಹಲಿ: ಕೇಂದ್ರ ಕಾರ್ಮಿಕ ಇಲಾಖೆಯ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ(ಇಪಿಎಫ್‌ಒ) ಹೊಸ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆ ಆಯ್ಕೆಯ ಸೌಲಭ್ಯವನ್ನು ಕಲ್ಪಿಸದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ(ಇಪಿಎಫ್‌ಒ) ಹೊಸ ವೆಬ್‌ಸೈಟ್‌ನಲ್ಲಿ  ಹಿಂದಿ , ತಮಿಳು, ಮಲಯಾಳಂ ಮತ್ತು ಗುಜರಾತಿ ಭಾಷೆಯ ಆಯ್ಕೆಗಳಿವೆ. ಆದರೆ ಕನ್ನಡ ಭಾಷೆಯ ಆಯ್ಕೆ ಇಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾದಾನ ವ್ಯಕ್ತಪಡಿಸಿದ್ದಾರೆ.

ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯದಿಂದ ಅತಿ ಹೆಚ್ಚು ಭವಿಷ್ಯ ನಿಧಿ ಸಂಗ್ರಹವಾಗುತ್ತಿದ್ದು  ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ ಕೇಂದ್ರ ಸರ್ಕಾರ ಕನ್ನಡವನ್ನು ಕಡೆಗಣಿಸಿದೆ. ಈ ರೀತಿಯಾಗುತ್ತಿರುವುದು ಇದು ಮೊದಲಲ್ಲ, ಭಾರತ ಒಕ್ಕೂಟ ವ್ಯವಸ್ಥೆ ಜಾರಿಯಾದಗಿನಿಂದಲೂ  ಕನ್ನಡ ,ಕರ್ನಾಟಕ, ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ದೋರಣೆ ತೋರುತ್ತಿದೆ ಎಂದು ಕನ್ನಡ ಗ್ರಾಹಕರ ಕೂಟದ ಅಭಿಯಾನಗಳು & ಭಾರತದಲ್ಲಿ ಕನ್ನಡಕ್ಕೆ ಆಡಳಿತ ಭಾಷೆ ಕೊಡಬೇಕೆನ್ನುವ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಅರುಣ್ ಜಾವಗಲ್‌ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ  ಪೊಸ್ಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.