ADVERTISEMENT

ತಹಶೀಲ್ದಾರ್‌ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ತಹಶೀಲ್ದಾರ್‌ ಆತ್ಮಹತ್ಯೆ
ತಹಶೀಲ್ದಾರ್‌ ಆತ್ಮಹತ್ಯೆ   

ಮೈಸೂರು: ತಿ.ನರಸೀಪುರ ತಹಶೀಲ್ದಾರ್ ಬಿ.ಶಂಕರಯ್ಯ (58) ಪಟ್ಟಣದ ಕಾವೇರಿ ವಸತಿ ಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಯದೊತ್ತಡದಿಂದ ಮನನೊಂದು ಸಾವಿಗೆ ಶರಣಾಗಿದ್ದಾಗಿ ಬರೆದಿಟ್ಟಿರುವ ಡೆತ್‌ನೋಟ್‌ ಸಿಕ್ಕಿದೆ.

ಮಂಡ್ಯದ ಶಂಕರಯ್ಯ 2016ರ ಆಗಸ್ಟ್‌ನಲ್ಲಿ ತಹಶೀಲ್ದಾರ್‌ ಆಗಿ ತಿ.ನರಸೀಪುರಕ್ಕೆ ಬಂದಿದ್ದರು. ಕುಟುಂಬ ಮಂಡ್ಯದಲ್ಲಿ ನೆಲೆಸಿದ್ದರಿಂದ, ವಸತಿ ಗೃಹದಲ್ಲಿ ವಾಸವಾಗಿದ್ದರು.

‘ತಹಶೀಲ್ದಾರ್‌ ಅವರನ್ನು ಕಚೇರಿಗೆ ಕರೆದೊಯ್ಯಲು ಬುಧವಾರ ಬೆಳಿಗ್ಗೆ ಕಾರು ಚಾಲಕ ವಸತಿ ಗೃಹಕ್ಕೆ ಧಾವಿಸಿದಾಗ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಅವರು ಕಿಟಕಿ ತೆರೆದು ಇಣುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ.  ತನಿಖೆಯ ದೃಷ್ಟಿಯಿಂದ ಡೆತ್‌ನೋಟ್‌ ಅನ್ನು ಪೊಲೀಸರು ಗೋಪ್ಯವಾಗಿಟ್ಟಿದ್ದಾರೆ’ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಮಾಹಿತಿ ನೀಡಿದ್ದಾರೆ. ಗುರುವಾರ ಮಂಡ್ಯದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.