ADVERTISEMENT

ತುಮಕೂರು ಎ.ಸಿ 24 ಸೈಟ್‌ಗಳ ಒಡೆಯ!

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:36 IST
Last Updated 22 ಮಾರ್ಚ್ 2018, 19:36 IST

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ದಾಳಿಗೆ ಒಳಗಾಗಿರುವ ತುಮಕೂರು ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ 24 ನಿವೇಶನಗಳ ಒಡೆಯ! ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್‌, ಚಿತ್ರದುರ್ಗದಲ್ಲಿ ಎರಡು ಮನೆಗಳು ಮತ್ತು 10.20 ಎಕರೆ ಜಮೀನನ್ನೂ ಅವರು ಹೊಂದಿದ್ದಾರೆ.

ಎಸಿಬಿ ಮಂಗಳವಾರ ಆರು ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಆದಾಯ ಮೀರಿ ಭಾರಿ ಆಸ್ತಿ ಗಳಿಸಿರುವುದನ್ನು ಪತ್ತೆ ಹಚ್ಚಿದೆ. ಆಸ್ತಿ ವಿವರಗಳನ್ನು ಗುರುವಾರ ಬಹಿರಂಗಪಡಿಸಿದೆ.

ತಿಪ್ಪೇಸ್ವಾಮಿ ಮನೆಯಲ್ಲಿ ₹ 17.33 ಲಕ್ಷ ನಗದು ಪತ್ತೆಯಾಗಿದ್ದು, ಹುಮ್ನಾಬಾದ್‌ ಕಾರಂಜಾ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಕುಮಾರ್ ಮಾಶೆಟ್ಟಿ ಮನೆಯಲ್ಲಿ ₹ 47.02 ಲಕ್ಷ ನಗದು ಸಿಕ್ಕಿದೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.

ADVERTISEMENT

ಆರು ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಆಸ್ತಿ ವಿವರ ಇಂತಿದೆ.

ಅಧಿಕಾರಿ ಹೆಸರು                                  ಸ್ಥಿರಾಸ್ತಿ                             ಚರಾಸ್ತಿ

ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ, ತುಮಕೂರು //  ಚಿತ್ರದುರ್ಗದಲ್ಲಿ 2 ಮನೆ, 24 ನಿವೇಶನ, 10 ಎಕರೆ 20 ಗುಂಟೆ ಜಮೀನು, ಬೆಂಗಳೂರಿನಲ್ಲಿ 1 ನಿವೇಶನ // 495 ಗ್ರಾಂ ಚಿನ್ನ, 1 ಕೆ.ಜಿ 914 ಗ್ರಾಂ ಬೆಳ್ಳಿ, 1 ಇನ್ನೋವಾ ಕಾರು, 2 ಸ್ವಿಫ್ಟ್ ಕಾರು, 2 ದ್ವಿಚಕ್ರ ವಾಹನಗಳು, ₹ 17.33 ಲಕ್ಷ ನಗದು, ₹ 11.82 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು.

ಗೋಪಾಲಕೃಷ್ಣ, ಜಂಟಿ ನಿರ್ದೇಶಕ, ದಾವಣಗೆರೆ– ಹರಿಹರ ನಗರಾಭಿವೃದ್ದಿ ಪ್ರಾಧಿಕಾರ// ದಾವಣಗೆರೆಯಲ್ಲಿ 2 ಮನೆ, 3 ನಿವೇಶನ, 3 ಎಕರೆ 11 ಗುಂಟೆ ಜಮೀನು.// 1 ಕೆ.ಜಿ ಚಿನ್ನ, 760 ಗ್ರಾಂ ಬೆಳ್ಳಿ, ಒಂದು ಸ್ವಿಫ್ಟ್ ಕಾರು, ಎರಡು ದ್ವಿಚಕ್ರ ವಾಹನ, ₹ 48.59 ಲಕ್ಷ ಬ್ಯಾಂಕ್ ಠೇವಣಿ.

ವಿಜಯಕುಮಾರ್ ಮಾಶೆಟ್ಟಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಾರಂಜಾ ಯೋಜನೆ, ಹುಮ್ನಾಬಾದ್‌, ಬೀದರ್ ಜಿಲ್ಲೆ// ಕಲಬುರ್ಗಿಯಲ್ಲಿ 1 ಮನೆ, 2 ನಿವೇಶನ, ಮುಚಾಳಾಂಬದಲ್ಲಿ 1 ಮನೆ, 2 ನಿವೇಶನ, ಬೀದರ್‌ನಲ್ಲಿ 3 ನಿವೇಶನ, ಬಸವಕಲ್ಯಾಣದಲ್ಲಿ 2 ನಿವೇಶನ, ಮುಂಬಯಿಯಲ್ಲಿ 1 ಫ್ಲ್ಯಾಟ್‌.// 1 ಮಹಿಂದ್ರಾ ಬೋಲೆರೋ ಜೀಪು, 2 ದ್ವಿಚಕ್ರ ವಾಹನ, 4 ಕೆ.ಜಿ 99 ಗ್ರಾಂ ಚಿನ್ನ, 9 ಕೆ.ಜಿ 492 ಗ್ರಾಂ ಬೆಳ್ಳಿ, ₹ 44.74 ಲಕ್ಷ ಠೇವಣಿ, ₹ 47.02 ಲಕ್ಷ ನಗದು, ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ₹ 8 ಲಕ್ಷ, ₹ 27.99 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು.

ಕಿರಣ್ ಸುಬ್ಬಾರಾವ್ ಭಟ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಬೆಳಗಾವಿ ಮಹಾನಗರ ಪಾಲಿಕೆ// ಬೆಳಗಾವಿಯಲ್ಲಿ 1 ವಾಸದ ಮನೆ, 1 ಫ್ಲ್ಯಾಟ್‌, ಬೆಂಗಳೂರಿನಲ್ಲಿ 2 ಫ್ಲ್ಯಾಟ್‌ // 1 ಹೋಂಡಾ ಝಾಜ್ ಕಾರು, 2 ದ್ವಿಚಕ್ರ ವಾಹನ, 1 ಕೆ.ಜಿ 261 ಗ್ರಾಂ ಚಿನ್ನ, 5 ಕೆ.ಜಿ 826 ಗ್ರಾಂ ಬೆಳ್ಳಿ, ವಿವಿಧ ಬ್ಯಾಂಕ್‍ಗಳಲ್ಲಿ ₹ 37.11 ಲಕ್ಷ ಠೇವಣಿ, ₹ 10 ಲಕ್ಷ ಮೌಲ್ಯದ ಗೃಹ ಬಳಕೆ ವಸ್ತುಗಳು.


‌ಶ್ರೀಪತಿ ದೊಡ್ಡಲಿಂಗಣ್ಣನವರ್, ಉಪ ಮುಖ್ಯ ಭದ್ರತೆ ಮತ್ತು ಜಾಗೃತಾಧಿಕಾರಿ, ಎನ್‍ಇಕೆಆರ್‍ಟಿಸಿ, ಕಲಬುರ್ಗಿ.// ಧಾರವಾಡದಲ್ಲಿ 1 ವಾಸದ ಮನೆ, 2 ನಿವೇಶನ, ಡಿ.ಎನ್. ಕೊಪ್ಪದಲ್ಲಿ 3 ನಿವೇಶನ, ಹಾವೇರಿಯಲ್ಲಿ 5 ನಿವೇಶನ, ಕಲ್ಲಘಟಗಿಯಲ್ಲಿ 6 ಎಕರೆ 34 ಗುಂಟೆ ಕೃಷಿ ಜಮೀನು, ಹಿರೇಕೆರೂರುನಲ್ಲಿ 5 ಎಕರೆ 24 ಗುಂಟೆ ಜಮೀನು, ಕಲ್ಲಘಟಗಿಯಲ್ಲಿ 2 ಎಕರೆ ಮತ್ತು ಬೆಳಗಾವಿಯಲ್ಲಿ 32.17 ಎಕರೆ ಕೃಷಿ ಜಮೀನು ಖರೀದಿಸುವ ಸಂಬಂಧ ಮುಂಗಡ ನೀಡಿದ್ದಾರೆ.//  ಒಂದು ಮಾರುತಿ 800 ಕಾರು, 136 ಗ್ರಾಂ ಚಿನ್ನ, 2 ಕೆ.ಜಿ 146 ಗ್ರಾಂ ಬೆಳ್ಳಿ, ₹ 12.47 ಲಕ್ಷ ಬ್ಯಾಂಕ್ ಠೇವಣಿ.

ಕೀರ್ತಿ ಜೈನ್, ಕಂದಾಯ ನಿರೀಕ್ಷಕ, ಕಳಸ, ಚಿಕ್ಕಮಗಳೂರು ಜಿಲ್ಲೆ// ಕಳಸದಲ್ಲಿ ಒಂದು ವಾಸದ ಮನೆ, 9 ಎಕರೆ 34 ಗುಂಟೆ ಜಮೀನು, ಸಂಸೆ ಗ್ರಾಮದಲ್ಲಿ 8 ಗುಂಟೆ ಜಮೀನು, ಮಳವಂತಿಗೆ ಗ್ರಾಮದಲ್ಲಿ 1.59 ಸೆಂಟ್ ಜಮೀನು. // 200 ಗ್ರಾಂ ಚಿನ್ನ, 750 ಗ್ರಾಂ ಬೆಳ್ಳಿ, 1 ಸ್ವಿಫ್ಟ್ಟ್ ಡಿಸೈರ್ ಕಾರು, 1 ಮಾರುತಿ 800 ಕಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.