ADVERTISEMENT

ನಾಳೆ ಸಂಪುಟ ವಿಸ್ತರಣೆ: ಡಿಕೆಶಿ, ಲಾಡ್‌ ಸೋದರರಿಗೆ ಸ್ಥಾನವಿಲ್ಲ ?

ಕಾಗೋಡು ತಿಮ್ಮಪ್ಪ ಸ್ಪೀಕರ್ ?

​ಪ್ರಜಾವಾಣಿ ವಾರ್ತೆ
Published 17 ಮೇ 2013, 13:02 IST
Last Updated 17 ಮೇ 2013, 13:02 IST

ಬೆಂಗಳೂರು (ಪಿಟಿಐ/ಐಎಎನ್‌ಎಸ್): ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟವನ್ನು ಶನಿವಾರ ವಿಸ್ತರಣೆ ಮಾಡಲಿದ್ದು, ಕಳಂಕಿತ ಶಾಸಕರಿಗೆ ಸಚಿವ ಸ್ಥಾನವನ್ನು ನಿರಾಕರಿಸಿದ್ದಾರೆ.

29 ಮಂದಿ ಶಾಸಕರು ಸಚಿವರಾಗಿ ನಾಳೆ ರಾಜಭವನದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ದೆಹಲಿಯಿಂದ ವಾಪಾಸಾದ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ತಿಳಿಸಿದರು.

ಯಾವುದೇ ಹಗರಣದಲ್ಲಿ ಶಾಮೀಲಾಗದ ಶಾಸಕರಿಗೆ ಮಾತ್ರ ಸಂಪುಟದಲ್ಲಿ ಅವಕಾಶ ಎಂಬುದನ್ನು ಅವರು ಇದೇ ವೇಳೆ ಸ್ಪಷ್ಟಪಡಿಸುವ ಮೂಲಕ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಡಿ.ಕೆ.ಶಿ, ಲಾಡ್ ಸಹೋದರರ ಆಸೆಗಳಿಗೆ ತಣ್ಣೀರು ಎರಚಿದರು.

ಸಂಪುಟ ವಿಸ್ತರಣೆಯು ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಮಹತ್ವದ ಸ್ಪೀಕರ್ ಸ್ಥಾನಕ್ಕೆ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರ ಹೆಸರನ್ನು ಪರಿಶೀಲಿಸಲಾಗುತ್ತಿದೆ ಎಂದು  ಸಿದ್ದರಾಮಯ್ಯ ತಿಳಿಸಿದರೆ ಅತ್ತ ತಿಮ್ಮಪ್ಪನವರು ತಮಗೆ ಸ್ಪೀಕರ್ ಸ್ಥಾನ ಬೇಡ ಎಂದು ನಿರಾಕರಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇದೇ ವೇಳೆ ಸಿದ್ದರಾಮಯ್ಯ ಅವರು ತಮ್ಮ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಸೃಷ್ಟಿಯನ್ನು ಸಾರಸಗಟಾಗಿ ತಳ್ಳಿಹಾಕಿದರು. ಹೀಗಾಗಿ ಉಪಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಎಂದೆ ಬಿಂಬಿತರಾದ ಜಿ. ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗೇ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ಸಾಂಭವ್ಯರ ಪಟ್ಟಿ ;
ಜಯಚಂದ್ರ,
ಆರ್.ವಿ. ದೇಶಪಾಂಡೆ
ಎಚ್.ಕೆ. ಪಾಟೀಲ್
ಶಾಮನೂರು ಶಿವಶಂಕರಪ್ಪ
ರಮಾನಾಥ ರೈ
ಅಂಬರೀಷ್
ರಾಮಲಿಂಗಾರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.