ADVERTISEMENT

ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆಗೆ ಮತ್ತೆ ಜೀವ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 19:30 IST
Last Updated 20 ಫೆಬ್ರುವರಿ 2017, 19:30 IST

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ  ರಚನೆಯಾಗಿದ್ದ ‘ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ’ಯನ್ನು ವಿಸರ್ಜಿಸಿದ್ದ ರಾಜ್ಯ ಸರ್ಕಾರ ಈಗ ಅದಕ್ಕೆ ಮತ್ತೆ ಜೀವ ನೀಡಿದೆ.

ಇದೇ 15ರಂದು ಸರ್ಕಾರ ಆದೇಶ ಹೊರಡಿಸಿದ್ದು, ಶಿವಮೊಗ್ಗದ ಎಸ್‌.ಚಂದ್ರಶೇಖರ್ ಅವರನ್ನು ಕಾರ್ಯಪಡೆ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.  ಇವರ ಅವಧಿ 1 ವರ್ಷ. ಈ ಹುದ್ದೆಯು ಸರ್ಕಾರದ ಒಂದು ಇಲಾಖೆಯ ಮುಖ್ಯಸ್ಥರ ಹುದ್ದೆಗೆ ಸಮನಾದ ಅಧಿಕಾರ ಹೊಂದಿರುತ್ತದೆ.

ಪರಿಸರ ವಿಷಯದಲ್ಲಿ ಪರಿಣತಿ ಇಲ್ಲದ ಕಾಂಗ್ರೆಸ್‌ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಕ್ಕೆ ಅರಣ್ಯ ಇಲಾಖೆಯ ಹಿರಿಯ  ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ. ‘ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಚಂದ್ರಶೇಖರ್‌ ಯಾವುದೇ ಕೊಡುಗೆ ನೀಡಿಲ್ಲ. ಈ ನೇಮಕದಿಂದ ನಿಷ್ಠಾವಂತರಿಗೆ ಅನ್ಯಾಯವಾಗಿದೆ’ ಎಂದು ಜಿಲ್ಲೆಯ ಶಾಸಕರು ದೂರಿದ್ದಾರೆ.

ADVERTISEMENT

ಕಾರ್ಯಪಡೆ ಸದಸ್ಯರ ಪಟ್ಟಿ

* ಬಿ.ಕೆ.ಸಿಂಗ್, ನಿವೃತ್ತ  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ.
* ಆರ್.ಎಂ.ಎನ್‌. ಸಹಾಯ್, ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ.
* ಎಂ.ಎಚ್‌. ಸ್ವಾಮಿನಾಥನ್, ನಿವೃತ್ತ ಐಎಎಫ್‌ ಅಧಿಕಾರಿ.
* ಡಾ. ಹರಿಣಿ ನಾಗೇಂದ್ರ, ಪ್ರಾಧ್ಯಾಪಕಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ.
* ಡಾ. ಶೋಭಾ ಆನಂದ್, ಪರಿಸರ ತಜ್ಞೆ.
* ಎಂ.ಡಿ. ಸುಭಾಷ್‌ ಚಂದ್ರ, ಕುಮಟಾ.
* ಜಯಕರ್‌ ಭಂಡಾರಿ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು, ಕಾರವಾರ.
* ಎ.ಜೆ.ಟಿ. ಜಾಂನ್ಟಿಂಗ್, ಉಭಯ ಚರ ಜೀವಿಗಳ ತಜ್ಞ, ಬೆಂಗಳೂರು.
* ಹರೀಶ ಭಟ್, ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು.
* ಬಾಲಚಂದ್ರ ಹೆಗಡೆ, ಪರಿಸರ ಮತ್ತು ಸುಸ್ಥಿರ ವ್ಯವಸಾಯ ತಜ್ಞ, ಶಿರಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.