ADVERTISEMENT

ಪ್ರಶಸ್ತಿ ವಿಜೇತ ಸ್ತಬ್ಧಚಿತ್ರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2014, 19:30 IST
Last Updated 4 ಅಕ್ಟೋಬರ್ 2014, 19:30 IST

ಮೈಸೂರು: ನಾಡಿನ ವಿವಿಧ ಮೂಲೆ­ಗಳಿಂದ ಬಂದಿದ್ದ ಸ್ತಬ್ಧಚಿತ್ರಗಳು ದಸರಾ ಮಹೋತ್ಸವದ ಬಂಬೂಸವಾರಿಯ ಮೆರುಗನ್ನು ಇಮ್ಮಡಿಗೊಳಿಸಿದವು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಸಾಗಿದ ಇವು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕ­ರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದವು.

ರಾಜ್ಯದ 29 ಜಿಲ್ಲಾ ಪಂಚಾಯಿತಿ, 6 ಇಲಾಖೆ, 6 ನಿಗಮ, ತೆಲಂಗಾಣ ಮತ್ತು ಪಾಂಡಿಚೇರಿ ಸೇರಿದಂತೆ ಒಟ್ಟು 44 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ­ದವು. ಕಲೆ ಸಂಸ್ಕೃತಿಯನ್ನು ಬಿಂಬಿ­ಸುವ, ಪ್ರಾದೇಶಿಕ ವಿಶೇಷತೆ­ಯನ್ನು ಪ್ರತಿನಿಧಿಸುವ ಪ್ರಯತ್ನ ಅನನ್ಯವಾಗಿತ್ತು.

ಕನ್ನಡ ಸಾಹಿತ್ಯ, ಸಂಸ್ಕೃತಿಯ ವೈಭವ ಹೆಚ್ಚಿಸಿದ ಸಾಹಿತಿ, ಕಲಾವಿದರನ್ನು ಸ್ಮರಿಸಲಾಯಿತು. ಪ್ರಮುಖ ಪ್ರವಾಸಿ ತಾಣಗಳು, ವಾಸ್ತು­ಶಿಲ್ಪ ಕಲೆಯ ದೇಗುಲ­ಗಳು ಸ್ತಬ್ಧಚಿತ್ರಕ್ಕೆ ವಸ್ತು­ವಾಗಿದ್ದವು. ಜಿಲ್ಲಾ ಪಂಚಾ­ಯಿತಿಗಳು ನಿರ್ಮಿಸಿದ ಸ್ತಬ್ಧಚಿತ್ರವನ್ನು ಪ್ರಾದೇಶಿಕ­ವಾರು ವಿಂಗಡಿಸಿ ಬಹುಮಾನ ನೀಡಲಾಗಿದೆ. ಪ್ರಥಮ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 10 ಸಾವಿರ, ಸಮಾ­ಧಾನಕರ ಸ್ಥಾನ ಪಡೆದ ಸ್ತಬ್ಧಚಿತ್ರಕ್ಕೆ ₨ 5 ಸಾವಿರ ಬಹುಮಾನ ನೀಡಲಾಯಿತು.

ವಿಜೇತ ಸ್ತಬ್ಧಚಿತ್ರ ಪಟ್ಟಿ ಹೊರ ರಾಜ್ಯ ವಿಭಾಗ

ತೆಲಂಗಾಣ (ಪ್ರಥಮ), ಪಾಂಡಿಚೇರಿ (ಸಮಾಧಾನಕರ)
ಇಲಾಖೆ, ನಿಗಮ ಮಂಡಳಿ ವಿಭಾಗ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಪ್ರಥಮ), ಪ್ರವಾಸೋದ್ಯಮ (ಸಮಾಧಾನಕರ)
ಬೆಂಗಳೂರು ವಿಭಾಗ
ತುಮಕೂರು (ಪ್ರಥಮ), ಶಿವಮೊಗ್ಗ (ಸಮಾಧಾನಕರ)
ಮೈಸೂರು ವಿಭಾಗ
ಮೈಸೂರು (ಪ್ರಥಮ), ಹಾಸನ (ಸಮಾಧಾನಕರ)
ಗುಲ್ಬರ್ಗ ವಿಭಾಗ
ಬಳ್ಳಾರಿ (ಪ್ರಥಮ), ಕೊಪ್ಪಳ (ಸಮಾಧಾನಕರ)
ಬೆಳಗಾವಿ
ಗದಗ (ಪ್ರಥಮ), ಬಾಗಲಕೋಟೆ (ಸಮಾಧಾನಕರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT