ADVERTISEMENT

ಬಜೆಟ್‌ನಲ್ಲಿ ಬೆಂಗಳೂರು ಪಾಲು

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 9:17 IST
Last Updated 12 ಜುಲೈ 2013, 9:17 IST

ಬೆಂಗಳೂರು : `ಬೆಂಗಳೂರು ತನ್ನ ವೈಭವವನ್ನು ಕಳೆದುಕೊಂಡಿದ್ದು ಅದನ್ನು ಮರಳಿ ಸ್ಥಾಪಿಸಬೇಕಿದೆ' ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಷ್ಕೃತ ಬಜೆಟ್ ಮಂಡನೆ ವೇಳೆ ಬೆಂಗಳೂರಿನ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ ಎಂದರು. ಇದೇ ವೇಳೆ ಉದ್ಯಾನನಗರಿ ಅಭಿವೃದ್ಧಿಗೆ ಕೆಲವು ಯೋಜನೆಗಳನ್ನು ಪ್ರಸ್ತಾಪಿಸಿದರು.

ಪ್ರಮುಖ ಯೋಜನೆಗಳು :
1. ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ 2250 ಕೋಟಿ ಅನುದಾನ.
2. 2014ರ ವೇಳೆಗೆ ಅರ್ಕಾವತಿ ಲೇಔಟ್ ನಿವೇಶನಗಳ ಹಂಚಿಕೆ.
3. ಆರ್.ಟಿ. ನಗರದಲ್ಲಿ 600 ಕೋಟಿ ವೆಚ್ಚದಲ್ಲಿ ಬಿಡಿಎ ಕಾಂಪ್ಲೆಕ್ಸ್ ನಿರ್ಮಾಣ.
4. ಬೆಂಗಳೂರು ಮತ್ತು ಮೈಸೂರಿನಲ್ಲಿ 4150 ಕೋಟಿ ವೆಚ್ಚದ ಜೆಎನ್‌ಎನ್‌ಆರ್‌ಎಂ ಪ್ರಾಜೆಕ್ಟ್
5. ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರದ ಅಭಿವೃದ್ಧಿ
6. ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೆಡ್ ರಸ್ತೆಗಳಿಗೆ ವೈ-ಫೈ
7. ಮಾರ್ಚ್ 2014ರ ವೇಳೆಗೆ ಕೆಂಪೇಗೌಡ ಲೇಔಟ್ ನಿರ್ಮಾಣ
8. ಕೆ. ಆರ್. ಪುರಂ ಸೇತುವೆ ಬಳಿ ಗ್ರೇಡ್ ಸಪರೇಟರ್.
9. 300 ಕೋಟಿ ವೆಚ್ಚದಲ್ಲಿ ಬನ್ನೇರುಘಟ್ಟ - ಸರ್ಜಾಪುರ ರಸ್ತೆ ಅಗಲೀಕರಣ.
10. ಬೆಂಗಳೂರು, ತುಮಕೂರು, ರಾಮನಗರ ಮಾರ್ಗದಲ್ಲಿ ಹೊಸ ರೈಲು ಯೋಜನೆಗಳು.
11. ಆಧುನಿಕ ತಂತ್ರಜ್ಞಾನದ ಮೂಲಕ ಕಸ ವಿಲೇವಾರಿಗೆ 100 ಕೋಟಿ.
12. 200 ಕೋಟಿ ವೆಚ್ಚದಲ್ಲಿ ನೂತನ ಮೇಲ್ಸೇತುವೆ ನಿರ್ಮಾಣ.
13. ಬಿಬಿಎಂಪಿ ವ್ಯಾಪ್ತಿಗೆ ಸೇರಿರುವ 110 ಹಳ್ಳಿಗಳ ಅಭಿವೃದ್ಧಿಗೆ 25. ಕೋಟಿ.
14. ಬೆಂಗಳೂರು ಉಪನಗರ ರೈಲು ನಿಗಮ ಸ್ಥಾಪನೆ.
15. 44 ಕೆರೆಗಳ ಅಭಿವೃದ್ಧಿಗೆ 100 ಕೋಟಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT