ADVERTISEMENT

ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 19:30 IST
Last Updated 24 ಏಪ್ರಿಲ್ 2014, 19:30 IST
ಶಿರಸಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ವೈದೇಹಿ ಅವರು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಟಿ.ನಾರಾಯಣ ಭಟ್ಟ, ರಾಜಶೇಖರ ಹೆಬ್ಬಾರ್, ಆರ್‌.ಡಿ.ಹೆಗಡೆ ಚಿತ್ರದಲ್ಲಿದ್ದಾರೆ.
ಶಿರಸಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ವೈದೇಹಿ ಅವರು ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಬಿ.ಎಚ್‌.ಶ್ರೀಧರ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಟಿ.ನಾರಾಯಣ ಭಟ್ಟ, ರಾಜಶೇಖರ ಹೆಬ್ಬಾರ್, ಆರ್‌.ಡಿ.ಹೆಗಡೆ ಚಿತ್ರದಲ್ಲಿದ್ದಾರೆ.   

ಶಿರಸಿ (ಉ.ಕ):  ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ ಅವರಿಗೆ ಗುರುವಾರ ಇಲ್ಲಿ ನಡೆದ ಕಾರ್ಯ­ಕ್ರಮದಲ್ಲಿ ಬಿ.ಎಚ್. ಶ್ರೀಧರ ಸಾಹಿತ್ಯ ಪ್ರಶಸ್ತಿಯನ್ನು ಸಾಹಿತಿ ವೈದೇಹಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೈದೇಹಿ, ‘ತಮಾಷೆ ನಂದಿಸಿಕೊಂಡ, ಮಾತು ಕಳೆದುಕೊಂಡ, ಮಾತು ಮಾಹಿತಿ ಆದ ಸಮಾಜದಲ್ಲಿ ನಾವಿ­ದ್ದೇವೆ. ಇಂತಹ ಸಮಾಜವನ್ನು ಲವಲ­ವಿಕೆಗೆ ತರುವ ಸವಾಲು ಸಾಹಿತಿಗಳ ಮುಂದಿದೆ’ ಎಂದರು.

‘ಮನಸ್ಸಿಗೆ ನೋವುಂಟು ಮಾಡುವ, ಅಮಾನವೀಯ ಅನೇಕ ಘಟನೆಗಳು ಸಮಾಜದಲ್ಲಿ ನಡೆಯುತ್ತಿವೆ. ಈ ದ್ವಂದ್ವ­ಗಳನ್ನು ಕತೆಗಾರರು ಕತೆಯಲ್ಲಿ ನಿರೂಪಿ­ಸಬಹುದು. ಆದರೆ ಇವನ್ನು ಹಾಸ್ಯದ ಮೂಲಕ ಸಮಾಜಕ್ಕೆ ತಲುಪಿಸುವುದು ಹಾಸ್ಯ ಬರಹಗಾರರಿಗೆ ಸವಾಲಾಗಿದೆ’ ಎಂದರು.

ಭುವನೇಶ್ವರಿ ಹೆಗಡೆ ಮಾತನಾಡಿ ‘ಅನುಭವವನ್ನು ಆಶ್ರಯಿಸಿಕೊಂಡವರು ಹಾಸ್ಯ ಸಾಹಿತಿಗಳು. ಆದರೆ ಎಂದಿಗೂ ಒಬ್ಬ ಬಡವ, ಒಬ್ಬ ಅಂಗವಿಕಲನನ್ನು ಕಂಡಾಗ ಹಾಸ್ಯ ಸೃಷ್ಟಿಯಾಗಲಿಲ್ಲ. ‘ಕುಂಠಿತ’ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಹಾಸ್ಯ ಮೂಡಿ ಬಂದಿದೆ’ ಎಂದರು.

ವಿಮರ್ಶಕ ಆರ್‌.ಡಿ.ಹೆಗಡೆ ಆಲ್ಮನೆ, ಸಾಹಿತ್ಯ ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ.ಟಿ.­ನಾರಾಯಣ ಭಟ್ಟ, ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.