ADVERTISEMENT

ಬಿಜೆಪಿ ಭಿನ್ನಮತ: ಪಕ್ಷದ ನಾಲ್ವರು ನಾಯಕರು ಅಮಾನತು

ಪಿಟಿಐ
Published 30 ಏಪ್ರಿಲ್ 2017, 9:56 IST
Last Updated 30 ಏಪ್ರಿಲ್ 2017, 9:56 IST
ಬಿಜೆಪಿ ಭಿನ್ನಮತ: ಪಕ್ಷದ ನಾಲ್ವರು ನಾಯಕರು ಅಮಾನತು
ಬಿಜೆಪಿ ಭಿನ್ನಮತ: ಪಕ್ಷದ ನಾಲ್ವರು ನಾಯಕರು ಅಮಾನತು   

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ನಡುವಿನ ಕಿತ್ತಾಟ ತಾರಕಕ್ಕೇರಿದ್ದು, ಬಿಜೆಪಿಯ ನಾಲ್ವರು ನಾಯಕರನ್ನು ಭಾನುವಾರ ಅಮಾನತುಗೊಳಿಸಲಾಗಿದೆ.

ಮುಂದಿನ ವರ್ಷ ಚುನಾವಣೆ ಎದುರಿಸಲು ರಾಜ್ಯ ಸಿದ್ಧವಾಗುತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿತ್ತು. ರಾಜ್ಯ ರಾಜಕೀಯದಲ್ಲಿನ ಈ ಪರಿಸ್ಥಿತಿ ಕೇಂದ್ರದಲ್ಲಿರುವ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಸೂಚನೆ ಮೇಲೆ ರಾಜ್ಯ ಬಿಜೆಪಿ ಉಸ್ತುವಾರಿ ವಹಿಸಿರುವ ಮುರಳೀಧರರಾವ್‌ ಶನಿವಾರ ರಾತ್ರಿ ಹೈದರಾಬಾದ್‌ನಿಂದ ಬೆಂಗಳೂರಿಗೆ ಧಾವಿಸಿದ್ದರು. 

ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ಕಿತ್ತಾಟದಿಂದ ಉದ್ಭವಿಸಿರುವ ಪರಿಸ್ಥಿತಿ  ಕುರಿತು ವರದಿ ನೀಡುವಂತೆ ಮುರಳೀಧರ್ ರಾವ್ ಅವರಿಗೆ ವರಿಷ್ಠರು ಸೂಚನೆ ನೀಡಿದ್ದರು. ಬೆಂಗಳೂರಿಗೆ ಆಗಮಿಸಿದ್ದ ರಾವ್,ನಿನ್ನೆ ಪಕ್ಷದ ನಾಯಕರ ಜೊತೆ ಚರ್ಚಿಸಿ ದೆಹಲಿಗೆ ಮರಳಿದ್ದಾರೆ.

ADVERTISEMENT

[related]

ಈ ಚರ್ಚೆಯ ನಂತರ ನಡೆದ ಬೆಳವಣಿಗೆಯಲ್ಲಿ ಈಶ್ವರಪ್ಪನವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಿಧಾನಪರಿಷತ್‌ ಸದಸ್ಯರಾದ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್ ಸುರಾನ ಹಾಗೂ ಯಡಿಯೂರಪ್ಪ ಅವರ ಆಪ್ತರಾದ ರೇಣುಕಾಚಾರ್ಯ ಮತ್ತು ಜಿ ಮಧುಸೂದನ್ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.