ADVERTISEMENT

ಬೆಂಗಳೂರು, ಮಂಗಳೂರು, ದಾವಣಗೆರೆ ಸೇರಿದಂತೆ 7 ಜಿಲ್ಲೆ ವ್ಯಾಪ್ತಿಯಲ್ಲಿ ಚಂಡಮಾರುತ ಪ್ರಭಾವ; ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2018, 14:19 IST
Last Updated 26 ಮೇ 2018, 14:19 IST
ಮೋಡದ ಚಲನೆಗಳ ಸ್ಯಾಟಲೈಟ್‌ ಚಿತ್ರವನ್ನು ಹವಾಮಾನ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಏಳು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ಇರುವ ಚಿತ್ರವನ್ನು ವಿಪತ್ತು ನಿರ್ವಹಣಾ ಇಲಾಖೆ ಟ್ವೀಟ್‌ ಮಾಡಿದೆ.
ಮೋಡದ ಚಲನೆಗಳ ಸ್ಯಾಟಲೈಟ್‌ ಚಿತ್ರವನ್ನು ಹವಾಮಾನ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಏಳು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ಇರುವ ಚಿತ್ರವನ್ನು ವಿಪತ್ತು ನಿರ್ವಹಣಾ ಇಲಾಖೆ ಟ್ವೀಟ್‌ ಮಾಡಿದೆ.   

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಮನಗರ, ತುಮಕೂರು, ಮಂಗಳೂರು, ದಾವಣಗೆರೆ, ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಚಂಡಮಾರುತದ ಪ್ರಭಾವ ಬೀರುತ್ತಿರುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಇಲಾಖೆ ಹೇಳಿದೆ.

ಚಂಡಮಾರುತ ಪ್ರಸ್ತುತ ಚಟುವಟಿಕೆಯಿಂದಿದ್ದು, ಪ್ರಭಾವ ಬೀರುತ್ತಿರುವುದರಿಂದ ಜನರು ಅನಗತ್ಯವಾಗಿ ಹೊರಗೆ ಹೋಗದೆ ಮನೆಯಲ್ಲಿ ಇರುವಂತೆ ಮುನ್ನೆಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ಶನಿವಾರ ಗುಡುಗು ಸಹಿತ ಮಳೆ ಆರಂಭವಾಗಿದ್ದು, ಭಾರಿ ಮಿಂಚು, ಸಿಡಿಲು ಇದ್ದು, ಅನಗತ್ಯವಾಗಿ ಜನರು ಹೊರ ಹೋಗದೆ ಮನೆಯಲ್ಲಿ ಉಳಿಯುವಂತೆ ಸೂಚಿಸಿ ಇಲಾಖೆ ಟ್ವೀಟ್‌ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.