ADVERTISEMENT

ಭವಾನಿ ರೇವಣ್ಣ ಜಿ.ಪಂ. ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ಭವಾನಿ ರೇವಣ್ಣ ಜಿ.ಪಂ. ಕಣಕ್ಕೆ
ಭವಾನಿ ರೇವಣ್ಣ ಜಿ.ಪಂ. ಕಣಕ್ಕೆ   

ಹೊಳೆನರಸೀಪುರ: ದೇವೇಗೌಡ ಅವರ ಕುಟುಂಬದ ಇನ್ನೊಬ್ಬ ಸೊಸೆ, ಶಾಸಕ ಎಚ್‌.ಡಿ. ರೇವಣ್ಣ ಅವರ ಪತ್ನಿ ಭವಾನಿ ಶನಿವಾರ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ.

ತಾಲ್ಲೂಕಿನ ಹಳೇಕೋಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಭವಾನಿ ನಾಮಪತ್ರ ಸಲ್ಲಿಸಿದರು. ಆ ಮೂಲಕ ಕಳೆದ ಒಂದು ವಾರದಿಂದ ಎದ್ದಿದ್ದ ವದಂತಿಗಳಿಗೆ ಮಂಗಳ ಹಾಡಿದ್ದಾರೆ. ಶನಿವಾರ ಬೆಳಿಗ್ಗೆ ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿವರೆಗೆ ಬಂದು ಭವಾನಿ, ನಾಮಪತ್ರ ಸಲ್ಲಿಸಿದರು. ಶಾಸಕ ಎಚ್‌.ಡಿ. ರೇವಣ್ಣ, ಪುತ್ರ ಪ್ರಜ್ವಲ್‌ ಮತ್ತಿತರರು ಇದ್ದರು.

ಈ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು. ನಂತರ, ಭವಾನಿ ಅವರ ಹೆಸರು ಕೇಳಿಬಂದು ಶುಕ್ರವಾರ ನಾಮಪತ್ರ ಸಲ್ಲಿಸುತ್ತಾರೆ ಎನ್ನುವ ಸುದ್ದಿ ಹಬ್ಬಿತು. ಅದರ ಜೊತೆಯಲ್ಲೇ ಭವಾನಿ ಸ್ಪರ್ಧಿಸುವುದಿಲ್ಲ ಎಂದೂ ಕೆಲವು ಕಾರ್ಯಕರ್ತರು ಹೇಳಿದ್ದರು. ಶನಿವಾರ ನಾಮಪತ್ರ ಸಲ್ಲಿಸಿರುವುದರಿಂದ ಈ ಎಲ್ಲ ವದಂತಿಗೆ ತೆರೆಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.