ADVERTISEMENT

ಭಾರಿ ಮಳೆಗೆ ಮಂಗಳೂರಿನಲ್ಲಿ ಮನೆ ಕುಸಿತ, ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 5:06 IST
Last Updated 9 ಜೂನ್ 2018, 5:06 IST
ಮಂಗಳೂರಿನಲ್ಲಿ ಮಾರುಕಟ್ಟೆ ಸಮೀಪದ ಭವಂತಿ ರಸ್ತೆಯಲ್ಲಿ ಶನಿವಾರ ಮನೆಯೊಂದರ ಗೋಡೆ, ಸಜ್ಜಾ ಕುಸಿದು ಬಿದ್ದಿದೆ.
ಮಂಗಳೂರಿನಲ್ಲಿ ಮಾರುಕಟ್ಟೆ ಸಮೀಪದ ಭವಂತಿ ರಸ್ತೆಯಲ್ಲಿ ಶನಿವಾರ ಮನೆಯೊಂದರ ಗೋಡೆ, ಸಜ್ಜಾ ಕುಸಿದು ಬಿದ್ದಿದೆ.   

ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ರಾತ್ರಿ ಬಿದ್ದ ನಿರಂತರ ಮಳೆಗೆ ಮಂಗಳೂರಿನಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಹಲವೆಡೆ ಮರಗಳು ಧರೆಗುರುಳಿವೆ.

ಮಾರುಕಟ್ಟೆ ಸಮೀಪದ ಭವಂತಿ ರಸ್ತೆಯಲ್ಲಿ ಶನಿವಾರ ಮನೆಯೊಂದರ ಗೋಡೆ, ಸಜ್ಜಾ ಕುಸಿದು ಬಿದ್ದಿದೆ.

ಇತ್ತ ಆರ್‌ಟಿಒ ಕಚೇರಿ ಬಳಿ ಮರವೊಂದು ರಸ್ತೆಗುರುಳಿದೆ. ರೈಲು ನಿಲ್ದಾಣದ ಬಳಿ ಮರ ಬಿದ್ದಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ.

ADVERTISEMENT

ಆರ್‌ಟಿಒ ಕಚೇರಿ ಬಳಿ ಮರ ಬಿದ್ದಿರುವುದು.

ರೈಲು ನಿಲ್ದಾಣದ ಬಳಿ ಬಿದ್ದಿರುವ ಮರ ತೆರವು ಕಾರ್ಯಾಚರಣೆ.

ಕರಾವಳಿಯಲ್ಲಿ ಮಳೆ ಶನಿವಾರವೂ ಮುಂದುವರಿದಿದ್ದು, ಬಿಟ್ಟು ಬಿಟ್ಟು ಭಾರಿ ಪ್ರಮಾಣದಲ್ಲಿ ಸುರಿಯುತ್ತಿದೆ.

ದಕ್ಣಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ ನೀಡಲಾಗಿದೆ. ಹಲವೆಡೆ ಕಾಲೇಜುಗಳೂ ರಜೆ ಘೋಷಿಸಿವೆ.

ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರು ತುಂಬಿ ಹರಿಯುತ್ತಿದೆ. ಕುಮಾರಧಾರ ನದಿಗೆ ನೂತನ ಸಂಪರ್ಕ ಸೇತುವೆ ನಿರ್ಮಾಣವಾಗಿರುವುದರಿಂದ ಕುಕ್ಕೆ ಭೇಟಿಗೆ ಅಡ್ಡಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.