ADVERTISEMENT

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

‘ಪ್ರಜಾವಾಣಿ’ಯ ಎಂ. ನಾಗರಾಜ, ‘ಡೆಕ್ಕನ್‌ ಹೆರಾಲ್ಡ್‌’ನ ಗಾಯತ್ರಿ ನಿವಾಸ್‌ಗೆ ಗೌರವ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2015, 19:30 IST
Last Updated 7 ಏಪ್ರಿಲ್ 2015, 19:30 IST

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2014ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥ ಎಂ. ನಾಗರಾಜ, ‘ಡೆಕ್ಕನ್‌ ಹೆರಾಲ್ಡ್‌’ ಸುದ್ದಿ ಸಂಪಾದಕಿ ಗಾಯತ್ರಿ ನಿವಾಸ್‌ ಸೇರಿದಂತೆ 34 ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆಗಾಗಿ ವಿಶೇಷ ಪ್ರಶಸ್ತಿಗೆ  ‘ದಿ ಹಿಂದೂ’ ಪತ್ರಿಕೆಯ ಅಸ್ಸಾಂ ರಾಜ್ಯ ಹಾಗೂ ದಕ್ಷಿಣ ಆಫ್ರಿಕಾದ  ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ  ಎಂ.ಎಸ್‌‌. ಪ್ರಭಾಕರ ಆಯ್ಕೆಯಾಗಿದ್ದಾರೆ. ಪ್ರಭಾಕರ ಅವರು ‘ಕಾಮರೂಪಿ’ ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ.

‘ಪ್ರಜಾವಾಣಿ’ಯ ನಿವೃತ್ತ ಸಹಾಯಕ ಸಂಪಾದಕ ಎಂ.ಕೆ. ಭಾಸ್ಕರರಾವ್‌ ಕೂಡ ವಾರ್ಷಿಕ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. 
ವಾರ್ಷಿಕ ಪ್ರಶಸ್ತಿಯು ₹ 20 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ.

ಆಯ್ಕೆಯಾದವರು:  ಕೋಟಿಗಾನಹಳ್ಳಿ ರಾಮಯ್ಯ, ಕೆ.ಬಿ. ರಾಮಪ್ಪ, ಬಿ. ಹೊನ್ನಪ್ಪ ಭಾವಿಕೇರಿ, ಲೀಲಾವತಿ, ಲಿಂಗೇನಹಳ್ಳಿ ಸುರೇಶ್ಚಂದ್ರ, ಇಫ್ತಿಕಾರ್‌ ಅಹಮದ್‌ ಷರೀಫ್‌, ವೀರೇಂದ್ರ ಶೀಲವಂತ, ರಿಜ್ವಾನ್‌ ಉಲ್ಲಾ ಖಾನ್‌, ಬಿ.ಎಸ್‌. ಪ್ರಭುರಾಜನ್‌, ಎಸ್‌. ನಾಗೇಂದ್ರ (ನೇತ್ರರಾಜು), ದೇವೇಂದ್ರಪ್ಪ ಎಚ್‌. ಕಪನೂಕರ, ಬಿ. ವಿ. ಗೋಪಿನಾಥ್‌, ರೋನ್ಸ್‌ ಬಂಟ್ವಾಳ, ಗಂಧರ್ವ ಸೇನಾ, ಶಿವಕುಮಾರ ಭೋಜಶೆಟ್ಟರ, ಶಿವಾನಂದ ತಗಡೂರು, ವಿ. ನಂಜುಂಡಪ್ಪ, ಎಚ್‌.ಟಿ. ಅನಿಲ್‌, ಆಸ್ಟ್ರೋ ಮೋಹನ್‌, ಬಸವರಾಜ ಹೊಂಗಲ, ಸಿ.ಎನ್. ರಾಜು, ನಾಗಲಕ್ಷ್ಮಿಬಾಯಿ, ವಿನಾಯಕ ಗಂಗೊಳ್ಳಿ, ಎನ್‌. ರವಿಕುಮಾರ್‌, ವಿಲಾಸ ಮೇಲಗಿರಿ, ಮಂಜುನಾಥ ಎಂ. ಅದ್ದೆ, ಲೈಕ್‌ ಎ. ಖಾನ್‌, ರಕ್ಷಾ ಕಟ್ಟೆ ಬೆಳಗಲಿ, ಎಸ್‌. ಲಕ್ಷ್ಮಿನಾರಾಯಣ, ಸಾಹುಕಾರ್‌ ಚಂದ್ರಶೇಖರ ರಾವ್‌, ಬಂಗ್ಲೆ ಮಲ್ಲಿಕಾರ್ಜುನ.

ಪತ್ರಿಕೆಗಳಿಗೆ: ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ  ಆಂದೋಲನ ಪ್ರಶಸ್ತಿ ‘ರಾಯಚೂರು ವಾಣಿ’ಗೆ ದೊರಕಿದೆ.  ವಿಜಯ ಕರ್ನಾಟಕದ ಸಿದ್ಧಲಿಂಗಸ್ವಾಮಿ ಅವರ ಲೇಖನಕ್ಕೆ ಅಭಿಮಾನಿ ಪ್ರಶಸ್ತಿ (ಸಾಮಾಜಿಕ ಸಮಸ್ಯೆ ಲೇಖನ) ಸಿಕ್ಕಿದೆ. ಮೈಸೂರು ದಿಗಂತ ಪ್ರಶಸ್ತಿಯು (ಮಾನವೀಯ ವರದಿ) ಉತ್ತರಕನ್ನಡದ ಲೋಕಧ್ವನಿಯ ಶ್ರೀಧರ್‌ ಬರೆದಿರುವ ವರದಿಗೆ ಸಂದಾಯವಾಗಿದೆ.

ಈ ಮೂರು ಪ್ರಶಸ್ತಿಗಳು ತಲಾ ₹ 10 ಸಾವಿರ ನಗದು ಬಹುಮಾನ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಏಪ್ರಿಲ್‌ 16ರಂದು ನಡೆಯಲಿದೆ  ಎಂದು ಅಕಾಡೆಮಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.