ADVERTISEMENT

ಮುಳುಗಡೆ ಪ್ರದೇಶದ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ: ರೈ

​ಪ್ರಜಾವಾಣಿ ವಾರ್ತೆ
Published 20 ಜುಲೈ 2016, 19:30 IST
Last Updated 20 ಜುಲೈ 2016, 19:30 IST

ಬೆಂಗಳೂರು: ವಿವಿಧ ಜಲಾಶಯಗಳ ಮುಳುಗಡೆ ಪ್ರದೇಶಗಳಲ್ಲಿ ಭೂಮಿ ಕಳೆದುಕೊಂಡು ಪುನರ್‌ವಸತಿ ಕಲ್ಪಿಸಲಾ ಗಿರುವ ಕುಟುಂಬಗಳಿಗೆ ಅರಣ್ಯ ಹಕ್ಕು ಪತ್ರ ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಅರಣ್ಯ ಮತ್ತು ಪರಿಸರ ಸಚಿವ ಬಿ.ರಮಾನಾಥ ರೈ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಶರಾವತಿ, ವರಾಹಿ, ಹಾರಂಗಿ ಸೇರಿದಂತೆ ವಿವಿಧ ಜಲಾಶಯಗಳಿಗಾಗಿ ರೈತರು ಭೂಮಿ ನೀಡಿದ್ದರು. ಅಂತಹ ಸಾವಿರಾರು ಕುಟುಂಬಗಳು ಅರಣ್ಯ ಪ್ರದೇಶದಲ್ಲೇ ವಾಸಿಸುತ್ತಿವೆ. 1960 ರಷ್ಟು ಹಿಂದೆಯೇ ಪುನರ್‌ವಸತಿ ಕಲ್ಪಿಸಿ ರುವ ಜನರಿಗೆ ಇನ್ನೂ ಹಕ್ಕು ಪತ್ರಗಳನ್ನು ನೀಡಿಲ್ಲ. ಅರಣ್ಯ ಮತ್ತು ಕಂದಾಯ ಭೂಮಿ ಗುರುತಿಸುವ ಕಾರ್ಯವೂ ನಡೆಯುತ್ತಿದೆ. ಈ ಪ್ರಕ್ರಿಯೆ ಮುಗಿದ ತಕ್ಷಣ ಅರಣ್ಯ ಭೂಮಿ (ಡೀಮ್ಡ್‌ ಫಾರೆಸ್ಟ್‌) ವ್ಯಾಪ್ತಿ ಕುರಿತು ನಿಖರ ಮಾಹಿತಿ ಇರುವ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.