ADVERTISEMENT

ರಾಜ್‌ಕುಮಾರ್‌ ಜತೆಗಿನ ಒಡನಾಟವನ್ನು ಪದಗಳಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ: ಭಗವಾನ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 6:43 IST
Last Updated 24 ಏಪ್ರಿಲ್ 2018, 6:43 IST
ರಾಜ್‌ಕುಮಾರ್‌ ಜತೆಗಿನ ಒಡನಾಟವನ್ನು ಪದಗಳಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ: ಭಗವಾನ್‌
ರಾಜ್‌ಕುಮಾರ್‌ ಜತೆಗಿನ ಒಡನಾಟವನ್ನು ಪದಗಳಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ: ಭಗವಾನ್‌   

ಬೆಂಗಳೂರು: ಮೇರು ನಟ ಡಾ.ರಾಜ್‌ಕುಮಾರ್‌ ಜತೆಗಿನ ಒಡನಾಟದ ಸಂತೋಷವನ್ನು ಪದಗಳಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಅದನ್ನು ಅನುಭವಿಸಿಯೇ ಅರ್ಥಮಾಡಿಕೊಳ್ಳಬೇಕು ಎಂದು ರಾಜ್‌ಕುಮಾರ್ ನಟನೆಯ ಹಲವು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದ್ದ ದೊರೈ–ಭಗವಾನ್ ಜೋಡಿ ಖ್ಯಾತಿಯ ಭಗವಾನ್ ಅವರು ತಮ್ಮ ಅನುಭವದ ನುಡಿಗಳನ್ನು ಹಂಚಿಕೊಂಡಿದ್ದಾರೆ.

ವರನಟ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಬೆಂಗಳೂರಿನ ಕಂಠೀರ ಸ್ಟುಡಿಯೊದಲ್ಲಿರುವ ಅವರ ಸಮಾಧಿ ಸ್ಥಳಕ್ಕೆ ತೆರಳಿದ್ದ ವೇಳೆ ನಮನ ಸಲ್ಲಿಸಿ ಮಾತನಾಡಿದರು.

ರಾಜ್‌ಕುಮಾರ್‌ ಇವತ್ತು ಭೌತಿಕ ರೂಪದಲ್ಲಿ ನಮ್ಮ ಜತೆ ಇಲ್ಲ. ಆದರೆ, ಅವರು ಸದಾ ನಮ್ಮ ಮನಸ್ಸಿನಲ್ಲಿ ಇರುತ್ತಾರೆ ಎಂದು ಅಭಿಮಾನದ ನುಡಿಗಳನ್ನಾಡಿದ್ದಾರೆ.

ADVERTISEMENT

ಪೂಜೆ ಸಲ್ಲಿಸಿದ ಪುತ್ರ ಶಿವರಾಜ್‌ಕುಮಾರ್‌

ರಾಜ್‌ ಸಮಾಧಿ ಸ್ಥಳಕ್ಕೆ ತೆರಳಿದ ಪುತ್ರ, ನಟ ಶಿವರಾಜ್‌ಕುಮಾರ್‌ ಅವರು ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿ, ಅಭಿಮಾನಿಗಳಿಗೆ ಸಿಹಿ ಹಂಚಿ, ರಕ್ತ ದಾನ ಶಿಬಿರಕ್ಕೆ ತೆರಳಿದರು.

‘ಅಭಿಮಾನಿ ದೇವರು’ಗಳನ್ನು ನೋಡಿ ತಂದೆ ಸಂತೋಷ ಪಡುತ್ತಿದ್ದಾರೆ: ಪುನಿತ್‌ ರಾಜ್‌ಕುಮಾರ್

ರಾಜ್‌ ಸಮಾಧಿ ಸ್ಥಳಕ್ಕೆ ತೆರಳಿದ ಪುತ್ರ, ನಟ ಪುನಿತ್‌ ರಾಜ್‌ಕುಮಾರ್‌ ಅವರು ಸಮಾಧಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ತಂದೆಯವರು ‘ಅಬಿಮಾನಿ ದೇವರುಗಳು’ ಎಂದು ಕರೆಯುತ್ತಿದ್ದ ಆ ಭಿಮಾನಿ ದೇವರುಗಳು ಇಂದು ಇಲ್ಲಿ ಬಂದಿದ್ದಾರೆ. ಈ ದಿನವನ್ನು ಅವರನ್ನು ಪ್ರೀತಿಸುವ ಮತ್ತು ಇಷ್ಟಪಡುವವರು, ಒಳ್ಳೆ ಮಾತನಾಡುತ್ತಿರುವವರು ನಮನ ಸಲ್ಲಿಸುತ್ತಿದ್ದಾರೆ. ಇದನ್ನು ನಮ್ಮ ತಂದೆ ನೋಡಿ ಸಂತೋಷ ಪಡುತ್ತಿದ್ದಾರೆ ಎಂದು ನನಗನ್ನಿಸುತ್ತದೆ ಎಂದರು.

ಶಿವಣ್ಣನ ಹೊಸ ಚಿತ್ರ ರುಸ್ತುಂಗೆ ಒಳ್ಳೆಯದಾಗಲಿ ಎಂದು ಪುನಿತ್‌ ಇದೇ ವೇಳೆ ಹೇಳಿದರು.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.