ADVERTISEMENT

ರಾಜ್ಯದ 68 ತಾಲ್ಲೂಕು ಬರಪೀಡಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 19:33 IST
Last Updated 28 ಸೆಪ್ಟೆಂಬರ್ 2016, 19:33 IST
ಕೊಡ ಕೊಳ್ಳುವವರ ಹುಡುಕಿ...ಒಂದೆಡೆ ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಮಂಡ್ಯ ಮತ್ತು ಮೈಸೂರಿನಲ್ಲಿ ಹೋರಾಟ ತೀವ್ರಗೊಂಡಿದೆ. ಇತ್ತ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಿತ್ಯ ಕುಡಿಯುವ ನೀರಿಗೆ ಹಾಹಾಕಾರ. ಹೀಗಾಗಿ, ಕೊಡಗಳಿಗೆ ಬೇಡಿಕೆಯೂ ಹೆಚ್ಚಿದೆ. ಪ್ಲಾಸ್ಟಿಕ್‌ ಬಿಂದಿಗೆ ಮಾರುವ ಮಹಿಳೆಯೊಬ್ಬಳು ಬಿಸಿಲಿನಲ್ಲಿ ಗ್ರಾಹಕರನ್ನು ಹುಡುಕುತ್ತ ಹೊರಟಿದ್ದ  ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಹೀಗೆ ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಬೆಂಗಳೂರು: ಮಲೆನಾಡು ಜಿಲ್ಲೆಗಳ ತಾಲ್ಲೂಕುಗಳು ಸೇರಿದಂತೆ ರಾಜ್ಯದ 68 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು, ಸೆಪ್ಟೆಂಬರ್ ಅಂತ್ಯ ದವರೆಗಿನ ಮಳೆ ಕೊರತೆ, ತೇವಾಂಶ ಆಧರಿಸಿ ಬರ ಪೀಡಿತ ತಾಲ್ಲೂಕು ಘೋಷಿ ಸಲು ನಿರ್ಧರಿಸಲಾಯಿತು ಎಂದರು.

ವಾಡಿಕೆಯ ಶೇ 20ಕ್ಕಿಂತ ಹೆಚ್ಚು ಮಳೆ ಕೊರತೆ, ಶೇ 50ಕ್ಕಿಂತ ಹೆಚ್ಚು ತೇವಾಂಶ ಕೊರತೆ, ಸತತ ನಾಲ್ಕು ವಾರ ಶುಷ್ಕ ಹವೆ ಹಾಗೂ ಬಿತ್ತನೆಯಾದ ಪ್ರದೇಶದಲ್ಲಿ ಶೇ 33ಕ್ಕಿಂತ ಹೆಚ್ಚು ಹಾನಿಯಾಗಿರುವ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬಹುದು ಎಂಬ ರಾಷ್ಟ್ರೀಯ  ವಿಪತ್ತು ಪರಿಹಾರ ನಿಧಿ (ಎನ್ ಡಿ ಆರ್ಎಫ್‌) ಮಾರ್ಗ ಸೂಚಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.