ADVERTISEMENT

ವಾನಳ್ಳಿಗೆ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ರಾಷ್ಟ್ರೀಯ ಪುರಸ್ಕಾರದೊಂದಿಗೆ ಡಾ.ನಿರಂಜನ ವಾನಳ್ಳಿ
ರಾಷ್ಟ್ರೀಯ ಪುರಸ್ಕಾರದೊಂದಿಗೆ ಡಾ.ನಿರಂಜನ ವಾನಳ್ಳಿ   

ಶಿರಸಿ (ಉತ್ತರ ಕನ್ನಡ): ಮೈಸೂರಿನಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ನಿರಂಜನ ವಾನಳ್ಳಿ ನಿರ್ದೇಶಿಸಿರುವ ‘ಲೈಲಾ ಗೋಲ್ಡ್’ ಕಿರುಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ದೊರೆತಿದೆ.

ಕೇಂದ್ರ ಸರ್ಕಾರದ ಪಂಚಾಯತ್‌ರಾಜ್ ಸಚಿವಾಲಯ ಪಂಚಾಯತ್‌ರಾಜ್ ಸಂಸ್ಥೆಗಳ ಕುರಿತು ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಶಿರಸಿ ತಾಲ್ಲೂಕು ವಾನಳ್ಳಿ ಮೂಲದ ನಿರಂಜನ ರಚಿಸಿ, ನಿರ್ದೇಶಿಸಿದ್ದ ಈ ಚಿತ್ರ ಪ್ರಥಮ ಸ್ಥಾನ ಪಡೆದಿದೆ.

ಪುರಸ್ಕಾರವು ₹ 7.50 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಬುಧವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಯಿತು. ಸ್ಪರ್ಧೆಗೆ 510 ಕಿರುಚಿತ್ರಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.