ADVERTISEMENT

ವೀಚಿ ಸಾಹಿತ್ಯ ಪ್ರಶಸ್ತಿಗೆ ಕೃತಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2016, 19:30 IST
Last Updated 5 ಅಕ್ಟೋಬರ್ 2016, 19:30 IST

ತುಮಕೂರು: ವೀಚಿ (ಚೀ.ಚಿಕ್ಕವೀರಯ್ಯ) ಸಾಹಿತ್ಯ ಪ್ರಶಸ್ತಿಗಾಗಿ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಶಸ್ತಿ ಮೊತ್ತವು ₹ 25000, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿಗಾಗಿ 2015ರಲ್ಲಿ ಪ್ರಕಟವಾದ ಕೃತಿಗಳನ್ನು ಪರಿಗಣಿಸಲಾಗುತ್ತದೆ.

ವೀಚಿ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು ₹ 5000 ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಭರವಸೆ ಮೂಡಿಸಿರುವ ಯುವ ಲೇಖಕರಿಗೆ ಈ ಪ್ರಶಸ್ತಿ ಕೊಡಲಾಗುವುದು. ಈ ಪ್ರಶಸ್ತಿಗೆ ಕಾಲಮಿತಿಯ ಯಾವುದೇ ಷರತ್ತುಗಳಿರುವುದಿಲ್ಲ.

ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಮುಕ್ತವಾದ ಅವಕಾಶವಿದೆ.  ಅ.31ರ ಒಳಗೆ ಕೃತಿಗಳ ತಲಾ ಎರಡು ಪ್ರತಿಗಳನ್ನು  ಕಳುಹಿಸಿ ಕೊಡಬೇಕು ಎಂದು ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಚ್‌.ನಾಗರಾಜು ತಿಳಿಸಿದ್ದಾರೆ. ಕಾರ್ಯದರ್ಶಿ, ವೀಚಿ ಸಾಹಿತ್ಯ ಪ್ರತಿಷ್ಠಾನ, ಪ್ರಜಾಪ್ರಗತಿ ಆಫೀಸ್, ಬಿ.ಎಚ್. ರಸ್ತೆ, ತುಮಕೂರು- 572102 ಇಲ್ಲಿಗೆ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.