ADVERTISEMENT

ಶಾಲಾ ವಲಯ ಸುರಕ್ಷಗೆ ಆದೇಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2015, 20:00 IST
Last Updated 4 ಸೆಪ್ಟೆಂಬರ್ 2015, 20:00 IST

ಬೆಂಗಳೂರು: ಶಾಲಾ ವಲಯಗಳಲ್ಲಿ  ಮಕ್ಕಳು ನಿರಾತಂಕವಾಗಿ ರಸ್ತೆ ದಾಟಲು ಅನುವಾಗುವಂತೆ ರಸ್ತೆ ಉಬ್ಬು, ಜೀಬ್ರಾ ಕ್ರಾಸಿಂಗ್‌, ಮಿಣುಕು ದೀಪ ಮತ್ತು ಎಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್‌ ಆದೇಶಿಸಿದೆ.

‘3 ತಿಂಗಳಲ್ಲಿ ಈ ಆದೇಶ ಪಾಲನೆ ಮಾಡಬೇಕು’ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ, ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ  ಆದೇಶಿಸಿದೆ.

‘ಅಶೋಕ ಪಿಲ್ಲರ್‌ ಬಳಿಯ ಪರಿಕ್ರಮ ಶಾಲೆ ಸುತ್ತಮುತ್ತ ಮಕ್ಕಳು ರಸ್ತೆ ದಾಟಲು ಅಡ್ಡಿಯಾಗುತ್ತಿದೆ. ಕ್ರಮ ಕೈಗೊಳ್ಳಲು ಪಾಲಿಕೆಗೆ ನಿರ್ದೇಶಿಸಬೇಕು’ ಎಂದು ಕೋರಿ ಪ್ರಕಾಶ್ ಬಾಬು ಎಂಬುವವರು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.