ADVERTISEMENT

ಶಾಸಕರು, ಸಂಸದರು ಆತ್ಮಸಾಕ್ಷಿಯಿಂದ ಮತ ಹಾಕಿಲ್ಲ: ಪರಮೇಶ್ವರ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:16 IST
Last Updated 21 ಜುಲೈ 2017, 6:16 IST
ಶಾಸಕರು, ಸಂಸದರು ಆತ್ಮಸಾಕ್ಷಿಯಿಂದ ಮತ ಹಾಕಿಲ್ಲ: ಪರಮೇಶ್ವರ್‌
ಶಾಸಕರು, ಸಂಸದರು ಆತ್ಮಸಾಕ್ಷಿಯಿಂದ ಮತ ಹಾಕಿಲ್ಲ: ಪರಮೇಶ್ವರ್‌   

ಬೆಂಗಳೂರು: ‘ಶಾಸಕರು, ಸಂಸದರು ಆತ್ಮಸಾಕ್ಷಿಯ ಪರವಾಗಿ ಮತ ಹಾಕಿದ್ದರೆ ಮೀರಾ ಕುಮಾರ್ ಅವರು ರಾಷ್ಟ್ರಪತಿ ಆಗುತ್ತಿದ್ದರು’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅಭಿಪ್ರಾಯಪಟ್ಟರು.

‘ಕೋಮುವಾದದ ವಿರುದ್ಧ ಆತ್ಮಸಾಕ್ಷಿ ಮತ ಹಾಕಿ ಎಂದು ಮೀರಾಕುಮಾರ್ ಅವರು ಮನವಿ ಮಾಡಿದ್ದರು. ವಿ.ವಿ. ಗಿರಿ ಅವರು ಇದೇ ರೀತಿ ಮನವಿ ಮಾಡಿ ರಾಷ್ಟ್ರಪತಿ ಆಗಿದ್ದರು’ ಎಂದರು.

ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು ಯುಪಿಎ ಜೊತೆಗೆ ಇದ್ದಿದ್ದರೂ ಫಲಿತಾಂಶ ಬೇರೆಯೇ ಆಗುತ್ತಿತ್ತು. ಆದರೂ, ಮೀರಾ ಕುಮಾರ್ ಅವರು ಶೇ 44ರಷ್ಟು ಮತ ಗಳಿಸಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ಗಟ್ಟಿಯಾಗಿದೆ ಎಂಬ ಸಂದೇಶ ರವಾನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.