ADVERTISEMENT

ಸಾವಿರಾರು ಅಡಿಕೆ ಮರ ನೆಲಸಮ

ಸಿಡಿಲು ಬಡಿದು ವ್ಯಕ್ತಿ ಸಾವು; 400 ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಶಿರಾ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ  ಅಡಿಕೆ ಮರಗಳು ನೆಲಕಚ್ಚಿರುವುದು
ಶಿರಾ ತಾಲ್ಲೂಕಿನ ತಾಳಗುಂದ ಗ್ರಾಮದಲ್ಲಿ ಅಡಿಕೆ ಮರಗಳು ನೆಲಕಚ್ಚಿರುವುದು   

ಶಿರಾ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ  ಧಾರಾಕಾರ ಮಳೆ ಹಾಗೂ ಭಾರಿ ಬಿರುಗಾಳಿಗೆ ಸುಮಾರು 10 ಸಾವಿರ ಅಡಿಕೆ ಮರಗಳು, ನಾಲ್ಕು ಸಾವಿರ ತೆಂಗಿನಮರಗಳು ನೆಲಸಮವಾಗಿದ್ದು, ನಾಲ್ಕು ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಕಾಳಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಜಯರಾಮಯ್ಯ (75) ಎಂಬುವರು ಮೃತಪಟ್ಟಿದ್ದಾರೆ. ಕಾಳಪುರ, ಮಾವನಹಳ್ಳಿ, ದೇವರಹಟ್ಟಿ, ದೊಡ್ಡಚಿಕ್ಕಗೂಳ, ಬೈರಾಪುರ, ಮಾಯಸಂದ್ರ, ತಾಳಗುಂದ, ಶಿರಾದಡು, ಮುಚ್ಚವೀರನಹಳ್ಳಿ, ಚಿಕ್ಕತಿಮ್ಮನಹಳ್ಳಿ, ಚೆನ್ನೇನಹಳ್ಳಿ, ಹೊನ್ನೇನಹಳ್ಳಿ  ಗ್ರಾಮಗಳಲ್ಲಿ  ತೀವ್ರ ಹಾನಿಯಾಗಿದೆ.

‘ಫಲ ಬಿಡುವ ಅಡಿಕೆ ಮತ್ತು ತೆಂಗಿನಮರಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ತಕ್ಷಣ ಸರ್ಕಾರ  ನೆರವಿಗೆ ಬರಬೇಕು’ ಎಂದು ತಾಳಗುಂದದ ರೈತ ಚಂದ್ರಣ್ಣ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಅಧಿಕಾರಿಗಳಿಗೆ ತೋಟಗಳನ್ನು ತೋರಿಸಿ ಕೆಲವು ರೈತ ಮಹಿಳೆಯರು ಬಿಕ್ಕಳಿಸಿದರು.

‘ಹಾನಿಯ ಬಗ್ಗೆ ಮುಖ್ಯಮಂತ್ರಿ ಅವರಿಗೆ  ಮಾಹಿತಿ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ ಶೀಘ್ರವೇ ಹೊಸ ಮನೆಗಳನ್ನು ಮಂಜೂರು ಮಾಡಲಾಗುವುದು’ ಎಂದು ಸಚಿವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT