ADVERTISEMENT

ಸೋರುತಿಹುದು ಬಸ್ ಚಾವಣಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 20:20 IST
Last Updated 29 ಜೂನ್ 2016, 20:20 IST
ಸೋರುತಿಹುದು ಬಸ್ ಚಾವಣಿ
ಸೋರುತಿಹುದು ಬಸ್ ಚಾವಣಿ   

ಆಲೂರು (ಹಾಸನ ಜಿಲ್ಲೆ): ಆಲೂರು ಪಟ್ಟಣದಿಂದ ಕದಾಳು ಗ್ರಾಮಕ್ಕೆ ಸಂಚರಿಸುವ ರಾಜ್ಯ ಸಾರಿಗೆ ಬಸ್‌ನಲ್ಲಿ (ಕೆಎ–13ಎಫ್– 1370) ಹೋಗಬೇಕಾದರೆ ಪ್ರಯಾಣಿಕರು ಛತ್ರಿ ಹಿಡಿದೇ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ.

ಕಾರಣ ಬಸ್ ಚಾವಣಿಯಿಂದ ಮಳೆ ನೀರು ಸೋರುತ್ತಿರುವುದು. ‘ಅರೆ ಮಲೆನಾಡಾಗಿರುವ ತಾಲ್ಲೂಕಿನ ಗ್ರಾಮೀಣ ಭಾಗಗಳಿಗೆ ಸಂಚರಿಸುವ ನಿಗಮದ ಬಹುತೇಕ ಬಸ್‌ಗಳ ಪರಿಸ್ಥಿತಿ ಇದೇ ರೀತಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಬಸ್‌ನಲ್ಲಿ ಶಾಲೆಗೆ ತೆರಳುವ ವಿದ್ಯಾರ್ಥಿಗಳ ಪಾಡಂತು ಹೇಳ ತೀರದಾಗಿದೆ.  ಅಲ್ಲದೇ, ಬಸ್‌ಗಳು ಗುಜರಿಗೆ ಹಾಕುವ ಸ್ಥಿತಿಯಲ್ಲಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತವೆ. ಆಗ್ಗಿಂದಾಗೆ ಅಪಘಾತಗಳೂ ಸಂಭವಿಸುತ್ತಿವೆ’ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನು ಗ್ರಾಮೀಣ ಭಾಗಗಳಿಗೆ ಬಿಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.