ADVERTISEMENT

12 ಕಡೆ ಡ್ರಗ್ಸ್‌ ಮಾರಾಟ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2015, 19:58 IST
Last Updated 23 ನವೆಂಬರ್ 2015, 19:58 IST

ಬೆಂಗಳೂರು: ವಿಠಲ ಮಲ್ಯ ರಸ್ತೆಯ 12 ಸ್ಥಳಗಳಲ್ಲಿ ಡ್ರಗ್ಸ್‌ ಮಾರಾಟ ನಡೆಯುತ್ತಿದೆ. ಇಚ್ಛಾಶಕ್ತಿ ಇದ್ದರೆ ಇದನ್ನು 24 ಗಂಟೆಗಳಲ್ಲಿ ನಿಲ್ಲಿಸಬಹುದು ಎಂದು ಬಿಜೆಪಿಯ ಲೆಹರ್ ಸಿಂಗ್‌ ಹೇಳಿದರು.

ರಾಜ್ಯದ ಕಾನೂನು–ಸುವ್ಯವಸ್ಥೆ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಅವರು, ‘ಪೊಲೀಸ್‌ ಠಾಣೆಗಳಿಂದ ಹಫ್ತಾ ವಸೂಲಿ ಆಗುವುದು ಹಿಂದಿನಿಂದಲೂ ಇದೆ. ಇದನ್ನು ತಡೆಯುವಲ್ಲಿ ಗೃಹ ಸಚಿವರೂ ಅಸಹಾಯಕರು’ ಎಂದರು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ, ಅತ್ಯಾಚಾರ ಎಸಗುವವರ ಸಂತಾನಶಕ್ತಿ ಹರಣ ಮಾಡುವ ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ರಾಜ್ಯದಲ್ಲಿ ಪ್ರಯತ್ನ ನಡೆಯಬೇಕು ಎಂದು ಕಾಂಗ್ರೆಸ್ಸಿನ ಮೋಟಮ್ಮ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.