ADVERTISEMENT

₹48,729 ಕೋಟಿ ಮೊತ್ತದ ಲೇಖಾನುದಾನಕ್ಕೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 19:31 IST
Last Updated 28 ಮಾರ್ಚ್ 2017, 19:31 IST

ಬೆಂಗಳೂರು: ಇದೇ ವರ್ಷದ ಜುಲೈವರೆಗೆ ವಿವಿಧ ಇಲಾಖೆಗಳಲ್ಲಿ ಖರ್ಚು ಮಾಡಬೇಕಾದ ಒಟ್ಟು ₹48,729 ಕೋಟಿ ಮೊತ್ತದ ಲೇಖಾನುದಾನಕ್ಕೆ ವಿಧಾನಮಂಡಲದ ಉಭಯ ಸದನಗಳು ಮಂಗಳವಾರ ಒಪ್ಪಿಗೆ ನೀಡಿವೆ.

ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ ಬಳಿಕ 4 ತಿಂಗಳ ವೆಚ್ಚಕ್ಕೆ ಸಂಬಂಧಿಸಿದ ಧನ ವಿನಿಯೋಗ ಮಸೂದೆ ಅಂಗೀಕಾರವಾಯಿತು.

ಇದಲ್ಲದೇ, ಬಜೆಟ್‌ನಲ್ಲಿ ಪ್ರಸ್ತಾಪಿಸಿದ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮದ್ಯದ ಮೇಲೆ ತೆರಿಗೆ ಹಾಗೂ ವಾಹನ ನೋಂದಣಿ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗಳಿಗೆ ಸದನದ ಒಪ್ಪಿಗೆ ಪಡೆಯಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.