ADVERTISEMENT

ಪೀಟರ್‌ ಪಾವ್ಲ್ ಸಲ್ಡಾನ ನೂತನ ಬಿಷಪ್‌

ಮಂಗಳೂರು ಧರ್ಮಪ್ರಾಂತ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 20:05 IST
Last Updated 3 ಜುಲೈ 2018, 20:05 IST
ನೂತನ ಬಿಷಪ್‌ ಪೀಟರ್‌ ಪಾವ್ಲ್ ಸಲ್ಡಾನ.
ನೂತನ ಬಿಷಪ್‌ ಪೀಟರ್‌ ಪಾವ್ಲ್ ಸಲ್ಡಾನ.   

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್‌ ಆಗಿ ಫಾದರ್ ಪೀಟರ್‌ ಪಾವ್ಲ್ ಸಲ್ಡಾನ ನೇಮಕಗೊಂಡಿದ್ದಾರೆ. ವ್ಯಾಟಿಕನ್‌ ಚರ್ಚ್‌ ಮಂಗಳವಾರ ನೇಮಕಾತಿ ಆದೇಶ ಹೊರಡಿಸಿದೆ.

ಮಂಗಳವಾರ ಮಧ್ಯಾಹ್ನ 3.30ಕ್ಕೆ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ವ್ಯಾಟಿಕನ್‌ ಚರ್ಚ್‌ನಲ್ಲಿ ಈ ನೇಮಕಾತಿಯನ್ನು ಪ್ರಕಟಿಸಿದರು. ಅದೇ ಸಮಯದಲ್ಲಿ ದೆಹಲಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಕೇಂದ್ರಗಳಲ್ಲೂ ಪ್ರಕಟಿಸ ಲಾಯಿತು. ಇವರು ಮಂಗಳೂರು ಧರ್ಮಪ್ರಾಂತ್ಯದ 14ನೇ ಬಿಷಪ್.

ಐಕಳದ ಕಿರೆಮ್‌ ಚರ್ಚ್‌ ವ್ಯಾಪ್ತಿಯಲ್ಲಿ 1964ರ ಏಪ್ರಿಲ್‌ 27ರಂದು ಜನಿಸಿದ ಪಾವ್ಲ್ ಸಲ್ಡಾನ, 1991ರ ಮೇ 6ರಂದು ಧರ್ಮಗುರುವಿನ ದೀಕ್ಷೆ ಪಡೆದಿದ್ದರು. ನಂತರ ಮೂಡುಬೆಳ್ಳೆ, ಮಿಲಾಗ್ರಿಸ್‌ ಮತ್ತು ವಿಟ್ಲ ಚರ್ಚ್‌ಗಳಲ್ಲಿ ಸಹಾಯಕ ಪಾದ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಉನ್ನತ ವ್ಯಾಸಂಗಕ್ಕಾಗಿ ರೋಮ್‌ಗೆ ತೆರಳಿದ್ದ ಅವರು 2001ರಲ್ಲಿ ಧರ್ಮಗುರುವಿನ ಪದವಿ ಪಡೆದಿದ್ದರು. ಅಲ್ಲಿನ ಪಾಂಟಿಫಿಷಿಯಲ್‌ ಅರ್ಬನ್ ವಿಶ್ವವಿದ್ಯಾಲಯದಲ್ಲಿ ಬೈಬಲ್‌ ಕುರಿತು ಸಂಶೋಧನೆ ನಡೆಸಿ, ಪಿಎಚ್‌.ಡಿ ಪದವಿ ಪಡೆದಿದ್ದರು. ನಂತರ ಅಲ್ಲಿಯೇ ಉಪನ್ಯಾಸಕರಾಗಿ ಕಾರ್ಯನಿರ್ವಹಿ ಸುತ್ತಿದ್ದರು.

ADVERTISEMENT

ಹಾಲಿ ಬಿಷಪ್‌ ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಪಾವ್ಲ್‌ ಸಲ್ಡಾನ ಪದಗ್ರಹಣದವರೆಗೂ ಬಿಷಪ್‌ ಆಗಿ ಮುಂದುವರಿಯಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ವ್ಯಾಪ್ತಿಗೆ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ 124 ಧರ್ಮ ಕೇಂದ್ರಗಳು ಸೇರಿವೆ. 2.48 ಲಕ್ಷ ಮಂದಿ ಕ್ರೈಸ್ತ ಧರ್ಮದ ಕೆಥೋಲಿಕ್‌ ಪಂಗಡದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.