ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ: ಪ್ರಾಧ್ಯಾಪಕ ಅಮಾನತು

ವಿಟಿಯು: ಜು. 9ರಂದು ಮರು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:45 IST
Last Updated 6 ಜುಲೈ 2018, 19:45 IST
ಪ್ರಶ್ನೆ ಪತ್ರಿಕೆ ಸೋರಿಕೆ
ಪ್ರಶ್ನೆ ಪತ್ರಿಕೆ ಸೋರಿಕೆ   

ಬೆಳಗಾವಿ:ಸಿವಿಲ್‌ ಎಂಜಿನಿಯರಿಂಗ್‌ 4ನೇ ಸೆಮಿಸ್ಟರ್‌ನ ‘ಬೇಸಿಕ್ ಡಿಟರ್ಮಿನೇಟ್‌ ಸ್ಟ್ರಕ್ಚರ್ ಅನಾಲಿಸಿಸ್’ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ದೃಢಪಟ್ಟಿರುವುದರಿಂದ, ಸಂಬಂಧಿಸಿದ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ಅಮಾನತು ಮಾಡಲಾಗಿದೆ.

ಜುಲೈ 9ರಂದು ಮರುಪರೀಕ್ಷೆ ನಡೆಸಲಾಗುವುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕುಲಪತಿ ಪ್ರೊ.ಕರಿಸಿದ್ದಪ್ಪ ಶುಕ್ರವಾರ ತಿಳಿಸಿದರು.

‘ಜೂನ್ 22ರಂದು ಮಧ್ಯಾಹ್ನ ಪರೀಕ್ಷೆ ನಡೆದಿತ್ತು. ಆದರೆ, ಜೂನ್ 20ರಂದೇ ಮಧ್ಯಾಹ್ನ ಪ್ರಶ್ನೆಪತ್ರಿಕೆಯ ಪ್ರತಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ್ದು ನಂತರ ತಿಳಿದುಬಂತು. ಆ ಕುರಿತು ತನಿಖೆ ನಡೆಸಲಾಗಿದ್ದು, ವಿಟಿಯುನಿಂದ ಯಾವುದೇ ಲೋಪವಾಗಿಲ್ಲ. ಕಾಲೇಜಿನ ಪ್ರಾಧ್ಯಾಪಕರೇ ಆ ರೀತಿ ಮಾಡಿದ್ದಾರೆಡ ಎನ್ನುವುದು ಖಚಿತವಾಗಿದೆ’ ಎಂದು‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಪರೀಕ್ಷೆ ನಡೆಸಲು ಆದ ಖರ್ಚನ್ನು ಅಮಾನತುಗೊಂಡಿರುವ ಪ್ರಾಧ್ಯಾಪಕರಿಂದಲೇ ವಸೂಲಿ ಮಾಡಲಾಗುವುದು ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.