ADVERTISEMENT

‘ಸುಧಾ’ ಯುಗಾದಿ ಪ್ರಬಂಧ ಸ್ಪರ್ಧೆ ಫಲಿತಾಂಶ: ಸಂತೋಷ, ಭಾರತಿ, ಮಿಸ್ರಿಯಾಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:31 IST
Last Updated 22 ಮಾರ್ಚ್ 2022, 19:31 IST
ಸಂತೋಷ ಗುಡ್ಡಿಯಂಗಡಿ, ಬಿ.ಎಂ. ಭಾರತಿ ಹಾದಿಗೆ, ಮಿಸ್ರಿಯಾ ಐ ಪಜೀರ್
ಸಂತೋಷ ಗುಡ್ಡಿಯಂಗಡಿ, ಬಿ.ಎಂ. ಭಾರತಿ ಹಾದಿಗೆ, ಮಿಸ್ರಿಯಾ ಐ ಪಜೀರ್   

ಬೆಂಗಳೂರು: ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿಯ ಸಂತೋಷ ಗುಡ್ಡಿಯಂಗಡಿ ಅವರ ‘ನಾಟ್ಕದ ರಾಜನೂ ರಿಯಲ್ ಕುದುರೆಯೂ’ ಬರಹ, ‘ಸುಧಾ’ ಯುಗಾದಿ ‍ಪ್ರಬಂಧ ಸ್ಪರ್ಧೆ–2022ರಲ್ಲಿ ಮೊದಲ ಬಹುಮಾನ ಪಡೆದಿದೆ.

ಹಾಸನದ ಬಿ.ಎಂ. ಭಾರತಿ ಹಾದಿಗೆ (‘ಕೊತ್ತಿಮರಿ’) ಹಾಗೂ ಬಂಟ್ವಾಳ ತಾಲ್ಲೂಕಿನ ಪೆರ್ಣಪಾಡಿಯ ಮಿಸ್ರಿಯಾ ಐ ಪಜೀರ್ (‘ನೇರ್ಚೆಯ ಕೋಳಿ’) ಅವರ ರಚನೆಗಳು ಎರಡು ಮತ್ತು ಮೂರನೇ ಬಹುಮಾನಗಳಿಗೆ ಆಯ್ಕೆಯಾಗಿವೆ. ಬಹುಮಾನಿತ ಪ್ರಬಂಧಗಳಿಗೆ ಕ್ರಮವಾಗಿ ₹10,000, ₹ 5000 ಹಾಗೂ ₹ 3000 ದೊರೆಯಲಿದೆ.

‘ಮನೆಮನೆಯ ಚಂದಿರ’ (ಪ್ರವೀಣ್‌ ಕುಮಾರ್‌ ಜಿ.), ‘ಸುನ್ನತಿ’ (ಸ್ವಾಲಿಹ್‌ ತೋಡಾರ್‌),→‘ಬಾಬು ಭಂಡಾರಿಯ ಸೂಪರ್ ಸಲೂನ್’ (ವಿನಾಯಕ ಅರಳಸುರಳಿ), ‘ಅವಮಾನಂ ಮನುಷ್ಯ ಲಕ್ಷಣಂ’ (ಸಂಪತ್‌ ಸಿರಿಮನೆ), ‘ಅಣಶಿಯೂ ಕನ್ನಡ ನಾಟಕವೂ...’ (ಅಕ್ಷತಾ ಕೃಷ್ಣಮೂರ್ತಿ) ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ.

ADVERTISEMENT

ಕವಯಿತ್ರಿ ಅಕ್ಷತಾ ಹುಂಚದಕಟ್ಟೆ ಮತ್ತು ಪ್ರಬಂಧಕಾರ ಈರಪ್ಪ ಎಂ. ಕಂಬಳಿ ಈ ವರ್ಷದ ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಏಳು ನೂರಕ್ಕೂ ಹೆಚ್ಚಿನ ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು.

ಯುವ ಮತ್ತು ಅನುಭವಿ ಬರಹಗಾರರ ವಿಶಿಷ್ಟ ಬರಹಗಳನ್ನೊಳಗೊಂಡ ‘ಸುಧಾ ಯುಗಾದಿ ವಿಶೇಷಾಂಕ’ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

**

ತೀರ್ಪುಗಾರರ ಅನಿಸಿಕೆ
ವರುಷ ವರುಷವೂ ಪ್ರಬಂಧ ಕಳಿಸುವವರ ಸಂಖ್ಯೆ ಹೆಚ್ಚುತ್ತಲೇ ಇರುವುದು ಕನ್ನಡ ಸಾಹಿತ್ಯಲೋಕದಲ್ಲಿ ಬರೆಯುವವರ ಮತ್ತು ಓದುವವರ ಉತ್ಸಾಹ ಎರಡೂ ಜೀವಂತ ಉಳಿದಿವೆ ಎಂಬುದರ ದ್ಯೋತಕವಾಗಿದೆ.
-ಅಕ್ಷತಾ ಹುಂಚದಕಟ್ಟೆ

**

ಸ್ಪರ್ಧೆಯ ಅಂತಿಮ ಹಂತಕ್ಕೆ ಬಂದಿದ್ದ ಪ್ರಬಂಧಗಳಲ್ಲಿ ಪ್ರತಿಯೊಂದೂ ಒಂದೊಂದು ಪ್ರಪಂಚವನ್ನು ಪ್ರತಿನಿಧಿಸುವ ಮೂಲಕ ಆಸಕ್ತಿದಾಯಕ ವಾಗಿದ್ದವು.
-ಈರಪ್ಪ ಎಂ. ಕಂಬಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.