ADVERTISEMENT

ಅಂಟಾರ್ಕ್ಟಿಕ್‌ ಕಡಲ ನೀರ್ಗಲ್ಲಿನ ಹರವು ಕ್ಷೀಣ

ಪಿಟಿಐ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಅಂಟಾರ್ಕ್ಟಿಕ್‌ ಕಡಲ ನೀರ್ಗಲ್ಲಿನ ಹರವು ಕ್ಷೀಣ
ಅಂಟಾರ್ಕ್ಟಿಕ್‌ ಕಡಲ ನೀರ್ಗಲ್ಲಿನ ಹರವು ಕ್ಷೀಣ   
ವಾಷಿಂಗ್ಟನ್: ಅಂಟಾರ್ಕ್ಟಿಕ್‌ದಲ್ಲಿ ಕಡಲ ನೀರ್ಗಲ್ಲಿನ ಪ್ರದೇಶವು ಕಳೆದ ನಾಲ್ಕು ದಶಕಗಳಲ್ಲಿಯೇ ಅತಿ ಕಡಿಮೆ ಪ್ರಮಾಣಕ್ಕೆ  ಕ್ಷೀಣಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
 
ಅಮೆರಿಕದ ರಾಷ್ಟ್ರೀಯ ಹಿಮ ಮತ್ತು ಮಂಜುಗಡ್ಡೆ ಮಾಹಿತಿ ಕೇಂದ್ರ (ಎನ್‌ಎಸ್‌ಐಡಿಸಿ) ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರದ ವೇಳೆಗೆ ಕಡಲು ನೀರ್ಗಲ್ಲು 20 ಲಕ್ಷ ಚದರ ಕಿ.ಮೀಯಷ್ಟು ಮಾತ್ರ ವ್ಯಾಪಿಸಿದೆ.
 
ದಕ್ಷಿಣ ಧ್ರುವದಲ್ಲಿ ಈ ತಿಂಗಳ ಅಂತ್ಯಕ್ಕೆ ಬೇಸಿಗೆ ಆರಂಭವಾಗುವುದರಿಂದ ಕಡಲ ನೀರ್ಗಲ್ಲು ಇನ್ನಷ್ಟು ಕರಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
 
ತಾಪಮಾನ ಏರಿಕೆಯ ಕಾರಣದಿಂದಾಗಿ ಭೂಮಿಯ ಉಷ್ಣಾಂಶ ಹೆಚ್ಚಲಿದೆ. ಇದರಿಂದ ಎರಡೂ ಧ್ರುವ ಪ್ರದೇಶಗಳಲ್ಲಿನ ಕಡಲ ನೀರ್ಗಲ್ಲಿನ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ.  ಆದರೆ, ಅಂಟಾರ್ಕ್ಟಿಕ್‌ದ ಸನ್ನಿವೇಶ ಹೆಚ್ಚು  ಅಸ್ಥಿರವಾಗಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.