ADVERTISEMENT

ಅಂತರ್ಜಾಲದ 30 ಪ್ರಭಾವಿಗಳಲ್ಲಿ ಮೋದಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2015, 9:07 IST
Last Updated 6 ಮಾರ್ಚ್ 2015, 9:07 IST

ನ್ಯೂಯಾರ್ಕ್(ಪಿಟಿಐ): ವಿಶ್ವದ ಅಂತರ್ಜಾಲ ತಾಣದ 30 ಪ್ರಭಾವಿ ವ್ಯಕ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಾನ ಪಡೆದಿದ್ದಾರೆ ಎಂದು ಟೈಮ್ ಮ್ಯಾಗಝಿನ್ ಹೇಳಿದೆ. ಈ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರೂ ಇದ್ದಾರೆ.

ಸಾಮಾಜಿಕ ಜಾಲ ತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಹಿಂಬಾಲಿಸುತ್ತಿರುವ ‘ಸೈಟ್ ಟ್ರಾಫಿಕ್’ ಮತ್ತು ಒಟ್ಟಾರೆ ಸುದ್ದಿ ಸಾಮರ್ಥ್ಯಗಳ ಆಧಾರದ ಮೇಲೆ ಪಟ್ಟಿಯನ್ನು ಸಿದ್ಧ ಮಾಡಲಾಗಿದೆ. ಹ್ಯಾರಿ ಪಾಟರ್ ಸರಣಿಗಳ ಲೇಖಕ ಜೆ.ಕೆ. ರಾವ್ಲಿಂಗ್ ಮತ್ತು ಗಾಯಕಿಯರಾದ ಟೇಲರ್ ಸ್ವಿಫ್ಟ್ ಮತ್ತು ಬಿಯೋನ್ಸ್ ಅವರ ಹೆಸರುಗಳು ಪಟ್ಟಿಯಲ್ಲಿವೆ.

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟು 38 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಾದ ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವವರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ನಂತರದ ಸ್ಥಾನದಲ್ಲಿ ಮೋದಿ ಅವರಿದ್ದಾರೆ ಎಂದು ಟೈಮ್ ಮ್ಯಾಗಝಿನ್ ಶುಕ್ರವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.