ADVERTISEMENT

ಅಚ್ಚರಿಯ ಪುನರ್‌ಜನ್ಮ ಪಡೆದ ಶತಾಯುಷಿ ಫಂಚು

​ಪ್ರಜಾವಾಣಿ ವಾರ್ತೆ
Published 3 ಮೇ 2015, 12:29 IST
Last Updated 3 ಮೇ 2015, 12:29 IST

ಕಠ್ಮಂಡು(ಪಿಟಿಐ): 8 ದಿನಗಳ ಹಿಂದೆ ನಡೆದ ಪ್ರಬಲ ಭೂಕಂಪನದಲ್ಲಿ  ಧ್ವಂಸಗೊಂಡಿದ್ದ ಮನೆಯೊಂದರ ಅವಶೇಷಗಳಡಿ ಸಿಲುಕಿದ್ದ  105  ವರ್ಷದ ವ್ಯಕ್ತಿಯೊಬ್ಬರು ಅಚ್ಚರಿಯ ರೀತಿಯಲ್ಲಿ  ಬದುಕುಳಿದ ಘಟನೆ ಕೇಂದ್ರೀಯ ನೇಪಾಳದಲ್ಲಿ ಭಾನುವಾರ ನಡೆದಿದೆ.

ನುವಾಕೊಟ್‌ ಜಿಲ್ಲೆಯ ಕಿಮ್ತಾಂಗ್‌ ಗ್ರಾಮಾಭಿವೃದ್ಧಿ ಸಮಿತಿ ಸದಸ್ಯ ಫಂಚು ಘಾಲೆ ಎಂಟು ದಿನಗಳಿಂದಲೂ ತಮ್ಮ ಮನೆಯ ಅವಶೇಷಗಳಡಿ ಸಿಲುಕಿದ್ದರು. ಅವರನ್ನು ನೇಪಾಳ ಪೊಲೀಸರ ನೇತೃತ್ವದ ಕಾರ್ಯಾಚರಣೆ ತಂಡವು ಅವರನ್ನು ಶನಿವಾರ ರಕ್ಷಿಸಿದೆ.

ಭೂಕಂಪದಿಂದ ಅವಶೇಷಗಳಡಿ ಸಿಲುಕಿದ್ದ ಫಂಚು ಅವರನ್ನು ರಕ್ಷಣಾ ಪಡೆಯು ಎಂಟು ದಿನಗಳ ಬಳಿಕ ಅವರನ್ನು ತಲುಪಲು ಸಾಧ್ಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸಣ್ಣಪುಟ್ಟ ಗಾಯಗಳನ್ನು ಹೊರತು ಪಡಿಸಿದರೆ ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗಾಗಿ ಅವರನ್ನು ತ್ರಿಶೂಲಿ ಜಿಲ್ಲಾಸ್ಪತ್ರೆಗೆ ಹೆಲಿಕಾಪ್ಟರ್‌ನಲ್ಲಿ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.